ಭಾನುವಾರ, ನವೆಂಬರ್ 27, 2022
26 °C

ವಾಚಕರ ವಾಣಿ: ಇದು ಅನಗತ್ಯ ಹುದ್ದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರಲ್ ಬಿಪಿನ್ ರಾವತ್ ಅವರ ದುರ್ಮರಣದಿಂದಾಗಿ 9 ತಿಂಗಳಿನಿಂದ ಖಾಲಿ ಇದ್ದ ಸೇನಾಪಡೆಗಳ ಮುಖ್ಯಸ್ಥರ (ಸಿಡಿಎಸ್) ಹುದ್ದೆಗೆ ಈಗ ಲೆಫ್ಟಿನೆಂಟ್‌ ಜನರಲ್ (ನಿವೃತ್ತ) ಅನಿಲ್ ಚೌಹಾನ್‌ ಅವರನ್ನು ನೇಮಕ ಮಾಡಲಾಗಿದೆ. ಸಿಡಿಎಸ್ ಹುದ್ದೆ ಅತ್ಯಗತ್ಯವಾದ ಹುದ್ದೆಯಲ್ಲ, 9 ತಿಂಗಳು ಖಾಲಿ ಬಿಟ್ಟರೂ ನಡೆಯುತ್ತದೆ ಎಂಬ ಭಾವನೆ ಇದರಿಂದ ಬರುತ್ತದೆ. ಆದರೆ ಭಾರತ ಗಣರಾಜ್ಯದ ರಾಷ್ಟ್ರಪತಿ, ಪ್ರಧಾನಮಂತ್ರಿ ಹುದ್ದೆಗಳಂತೆ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಈ ಹುದ್ದೆಯೂ ಅತ್ಯಗತ್ಯ. ಖಾಲಿ ಬಿಡುವುದು ಸರಿಯಲ್ಲ.

ಒಂದುವೇಳೆ ಆಡಳಿತಗಾರರು ಅತ್ಯಗತ್ಯ ಹುದ್ದೆ ಅಲ್ಲವೆಂದು ಭಾವಿಸುವುದಾದರೆ, ಹೊರೆಯಾಗುವ ಆ ಹುದ್ದೆಯನ್ನು ಅಂತ್ಯಗೊಳಿಸುವುದು ಸೂಕ್ತವಲ್ಲವೇ? ಇಲ್ಲವೆಂದಾದಲ್ಲಿ, ಬೇಕಾದಾಗ ಬೇಕಾದವರಿಗೆ ನೀಡಬಹುದಾದ ಹುದ್ದೆಯೆಂದು ಪರಿಭಾವಿಸಿದರೆ ತಪ್ಪಾಗಲಾರದಲ್ಲವೇ?

⇒ಧರ್ಮರಾಜ ಎಂ. ಕಲ್ಯಾಣಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು