ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದ್ವೇಷ ರಾಜಕಾರಣದ ಪರಾಕಾಷ್ಠೆ

Last Updated 27 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಆಂಧ್ರಪ್ರದೇಶದಲ್ಲಿ ಎನ್‌ಟಿಆರ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಹೆಸರನ್ನು ವೈಎಸ್ಆರ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಎಂದು ಬದಲಿಸಲು ಅಲ್ಲಿನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಮುಂದಾಗಿದ್ದಾರೆ. ಅವರು ಇದನ್ನು ಬಲವಾಗಿ ಸಮರ್ಥಿಸಿಕೊಂಡರೂ ಅವರ ಈ ಕ್ರಮದಲ್ಲಿ ದ್ವೇಷ ರಾಜಕಾರಣದ ಪರಾಕಾಷ್ಠೆ ಎದ್ದು ಕಾಣುತ್ತದೆ. ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನಗಳಲ್ಲೇ ಎನ್‌ಟಿಆರ್‌ ಹೆಸರಿನಲ್ಲಿರುವ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು ಅಥವಾ ಅವುಗಳ ಹೆಸರನ್ನು ಬದಲಿಸಿದ್ದರು.

ಹೆಸರನ್ನು ಬದಲಿಸುವುದರ ಬದಲಿಗೆ ಇನ್ನೊಂದು ಹೊಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಹೆಸರನ್ನು ಇಟ್ಟಿದ್ದರೆ ಅವರ ಘನತೆ ಹೆಚ್ಚುತ್ತಿತ್ತು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಮುಂದಿನ ಚುನಾವಣೆಯಲ್ಲಿ ಅಕಸ್ಮಾತ್‌ ತೆಲುಗುದೇಶಂ ಪಕ್ಷ ಅಧಿಕಾರಕ್ಕೆ ಬಂದರೆ, ಈ ವಿಶ್ವವಿದ್ಯಾಲಯಕ್ಕೆ ಹಳೆ ಹೆಸರೇ ಬರುವುದು ನಿಶ್ಚಿತ. ರಾಜಕಾರಣದಲ್ಲಿ ದ್ವೇಷ ಭಾವಕ್ಕೂ ಒಂದು ಮಿತಿ ಇರಬೇಕು.

- ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT