ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಶಿಕ್ಷೆಯ ಭಯದ ಕೊರತೆ

Last Updated 29 ಜುಲೈ 2022, 19:31 IST
ಅಕ್ಷರ ಗಾತ್ರ

ಯಾವುದೇ ಬಗೆಯ ಅಭಿಪ್ರಾಯಭೇದ ಇದ್ದಮಾತ್ರಕ್ಕೆ ಇಷ್ಟೊಂದು ನಿರ್ಭೀತವಾಗಿ ಜನರು ಹಿಂಸಾಚಾರದಲ್ಲಿ ತೊಡಗಿರುವುದನ್ನು ನೋಡಿದರೆ ಅವರಿಗೆ ಕಾನೂನಿನ ಭಯ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಈಗಿನ ಎಲ್ಲ ರಾಜಕಾರಣಿಗಳಲ್ಲಿ ಬರೀ ಮತ ಗಳಿಕೆ, ಅಧಿಕಾರದ ಗದ್ದುಗೆ ಏರುವ ಉದ್ದೇಶ ಮಾತ್ರ ಕಾಣುತ್ತಿದೆಯೇ ವಿನಾ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಕಾನೂನು–ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಬದ್ಧತೆ ಇಲ್ಲ.ಅಪರಾಧ ಕೃತ್ಯಗಳಲ್ಲಿ ತೊಡಗಿದವರನ್ನು ಎಗ್ಗಿಲ್ಲದೆ ಸಮರ್ಥಿಸಿಕೊಳ್ಳಬಲ್ಲರು. ಸಾವಿನ ಮನೆಯಲ್ಲೂ ರಾಜಕೀಯ ಲಾಭ ಪಡೆಯುವ
ಲೆಕ್ಕಾಚಾರದಲ್ಲೇ ಮುಳುಗಬಲ್ಲರು. ಶಾಂತಿಯು ಎಲ್ಲ ಧರ್ಮಗಳ ತಿರುಳಾಗಿದೆ. ಇದನ್ನು ಎಲ್ಲರೂ ಮನಗಾಣಬೇಕು. ಮೊದಲು, ಅಪರಾಧಿಗಳಿಗೆ ಶಿಕ್ಷೆಯ ಭಯ ಹುಟ್ಟಿಸಬೇಕಿದೆ. ಇಲ್ಲದಿದ್ದರೆ ಹಿಂಸಾತ್ಮಕ ಕೃತ್ಯಗಳು ಮರುಕಳಿಸುವ ಅಪಾಯ ಇದೆ.

- ಶರಣಬಸವ ಆರ್. ಪತ್ತಾರ,ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT