ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಬಿಸಿಯೂಟ ಸಿಬ್ಬಂದಿ, ಗೌರವಧನ ಏಕೆ?

Last Updated 11 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ನೌಕರರ ಪ್ರತಿಭಟನೆ ಒಂದಲ್ಲ ಒಂದು ರಾಜ್ಯದಲ್ಲಿ ನಡೆಯುತ್ತಲೇ ಇರುತ್ತದೆ. ಮಧ್ಯಾಹ್ನದ ಬಿಸಿಯೂಟ ತಯಾರಕರನ್ನು ‘ಕಾರ್ಯಕರ್ತೆಯರು’ ಎಂದು ಕರೆಯಲಾಗುತ್ತಿದೆಯೇ ಹೊರತು ‘ನೌಕರರು’ ಎಂದಲ್ಲ. ಹೀಗಾಗಿ ಅವರಿಗೆ ಕನಿಷ್ಠ ವೇತನದ ಬದಲು ಗೌರವಧನವನ್ನು ಮಾತ್ರ ನೀಡಲಾಗುತ್ತಿದೆ. ‘ಪ್ರತಿದಿನ 7–8 ಗಂಟೆ ಕೆಲಸ ಮಾಡಿದರೂ ನಮ್ಮ ಕೆಲಸವನ್ನು ಅರೆಕಾಲಿಕ ಎಂದು ಪರಿಗಣಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಬಿಸಿಯೂಟದ ಕಾರ್ಯಕರ್ತೆಯರು.

ಬಿಸಿಯೂಟ ನೌಕರರು ಅತಿ ಕಡಿಮೆ ವೇತನದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಕೊರೊನಾ ಹಾವಳಿಯಲ್ಲಿ ಸಾವನ್ನಪ್ಪಿದ ಸಿಬ್ಬಂದಿಯ ಕುಟುಂಬಗಳಿಗೆ ಯಾವುದೇ ತರಹದ ಪರಿಹಾರ ಸಿಕ್ಕಿಲ್ಲ. ಆದರೆ ಬೇರೆ ವರ್ಗದ ನೌಕರರು ಕೆಲಸ ಮಾಡದೇ ಸಂಬಳವನ್ನು ಪಡೆದಿದ್ದಾರೆ. ಅಡುಗೆ ಸಿಬ್ಬಂದಿ ಶಾಲೆಗೆ ಹೋಗಿ ಶಾಲೆಯನ್ನು ಶುಚಿಗೊಳಿಸಿ ಮೈದಾನದಲ್ಲಿರುವ ಕಸಕಡ್ಡಿಗಳನ್ನು ಶುಚಿಗೊಳಿಸಿ ಸೇವೆ ಸಲ್ಲಿಸಿದ್ದಾರೆ. ಅಷ್ಟಾದರೂ ಕೊಡುತ್ತಿರುವ ಕಡಿಮೆ ಸಂಬಳವನ್ನೂ ಸರಿಯಾದ ಸಮಯಕ್ಕೆ ಕೊಡದೆ ಮೂರ್ನಾಲ್ಕು ತಿಂಗಳಿಗೆ ಒಮ್ಮೆ ನೀಡಲಾಗುತ್ತಿದೆ.

ಇದಕ್ಕೆಲ್ಲ ಪ್ರತಿಭಟನೆ ಪರಿಹಾರವಲ್ಲ. ಶಿಕ್ಷಣ ಇಲಾಖೆಯ ಒಂದು ಅಂಗವಾಗಿರುವ ಬಿಸಿಯೂಟ ನೌಕರರ ಕಷ್ಟಗಳಿಗೆ ಸರ್ಕಾರ ಇನ್ನಾದರೂ ಸ್ಪಂದಿಸಲಿ. ಅವರಿಗೆ ಸೂಕ್ತ ವೇತನ ನೀಡಲು ಕ್ರಮ ಕೈಗೊಳ್ಳಲಿ.

- ಭೂಮಿಕಾ ದಾಸರಡ್ಡಿ ಬಿದರಿ,ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT