ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಶುದ್ಧ ಭಕ್ತಿ, ನಿಷ್ಕಾಮ ಕರ್ಮ

Last Updated 13 ಮೇ 2022, 22:00 IST
ಅಕ್ಷರ ಗಾತ್ರ

ಅಹಮದಾಬಾದ್ ಸಮೀಪದ ಕೊಚ್ರಾಬ್ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ತಾವು 15 ವರ್ಷಗಳಿಂದ ಉಳಿತಾಯ ಮಾಡಿದ ಹಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 13). ಈ ಮಹಿಳೆಯು ಅಂಬೇಡ್ಕರ್ ಅವರಲ್ಲಿ ದೇವರನ್ನು ಕಾಣುತ್ತಾರೆ. ಅದಕ್ಕಾಗಿಯೇ ಹನುಮಾನ್‌ ದೇವಸ್ಥಾನದ ಪಕ್ಕದಲ್ಲಿಯೇ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದಾರೆ. ಈ ಸ್ಥಾಪನೆಯ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ, ಪ್ರಚಾರದ ಹುಚ್ಚೂ ಇಲ್ಲ. ಬದಲು ಇಲ್ಲಿ ಕಾಣುವುದು ಕೇವಲ ಶುದ್ಧ ಭಕ್ತಿ, ನಿಷ್ಕಾಮ ಕರ್ಮ ಮಾತ್ರ. ಪ್ರಚಾರಕ್ಕಾಗಿ ಹಪಹಪಿಸುವ ಸಮಾಜದಲ್ಲಿ ಈ ಮಹಿಳೆ ತನ್ನ ಇಂತಹ ಕಾರ್ಯದಿಂದ ವಿಶೇಷವಾಗಿ ಕಾಣಿಸುತ್ತಾರೆ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT