ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಇವರಿಗೆ ಇವರೇ ಮಾದರಿ!

Last Updated 25 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಹೊಸ ಪೀಳಿಗೆಗೆ ಹಳೆ ರಾಜಕೀಯ ಮಾದರಿ’ ಎಂಬ ಚಂದ್ರಕಾಂತ ವಡ್ಡು ಅವರ ಲೇಖನ (ಪ್ರ.ವಾ., ಆಗಸ್ಟ್ 23) ಇಂದಿನ ಸಾಮಾಜಿಕ ಮತ್ತು ರಾಜಕೀಯ ಮೇಲಾಟದ ಪರಿಸ್ಥಿತಿಯಲ್ಲಿ ಒಂದು ಚಾರಿತ್ರಿಕ ದಾಖಲೆ ಅಷ್ಟೇ ಮತ್ತು ಆಸಕ್ತರು ಓದುವುದಕ್ಕೆ ಮಾತ್ರ ಸೂಕ್ತ. ವೈರುಧ್ಯದ ವಿಷಯಗಳು ಬಂದಾಗ ಗಾಂಧಿ ಟೋಪಿ ಹಾಕಿಕೊಂಡು ಸಂಭಾವಿತರ ಹಾಗೆ ಪೋಸು ಕೊಟ್ಟು ಬಾಯಿಗೆ ಬಂದಂತೆ ಮಾತನಾಡುವ ಹುಂಬ ರಾಜಕಾರಣಿಗಳೆಲ್ಲಿ, ಹಲವು ಬಾರಿ ವಿಧಾನಮಂಡಲದ ಸದಸ್ಯರಾಗಿದ್ದೂ ಸಾಧಾರಣ ಜೀವನ ಸಾಗಿಸಿದ್ದ ಕೆ. ಚನ್ನಬಸವನಗೌಡರೆಲ್ಲಿ! ಇಂದಿನ ರಾಜಕಾರಣಿಗಳಿಗೆ ಅಂತಹವರು ಹೇಗೆ ಮಾದರಿಯಾದಾರು? ಸುಮ್ಮನೆ ಅಂತಹವರ ಹೆಸರು ಮತ್ತು ನಡಾವಳಿಗಳನ್ನು ಪ್ರಸ್ತುತದ ಅತ್ಯಂತ ಗೌರವಾನ್ವಿತ(?)ರ ನಡಾವಳಿಗಳಿಗೆ ಹೋಲಿಸಿ ತಾಳೆ ಹಾಕಿದರೆ ಆ ಸಂಭಾವಿತರಿಗೆ ಅವಮಾನ ಮಾಡಿದಂತೆ! ಅವರ ರಾಜಕಾರಣ ಮತ್ತು ಜೀವನಶೈಲಿಯೇ ಬೇರೆ ಈಗಿನವರದೇ ಬೇರೆ. ಎಷ್ಟು ಹೇಳಿದರೂ ಬರೆದರೂ ಇವರಂತೂ ಬದಲಾಗರು. ಇವರಿಗೆ ಇವರೇ ಮಾದರಿ!

ಬಿ. ರಮೇಶ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT