ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಭಾವನೆ ಕೆದಕುವ ಅಗತ್ಯ ಇದೆಯೇ?

Last Updated 22 ಆಗಸ್ಟ್ 2021, 20:30 IST
ಅಕ್ಷರ ಗಾತ್ರ

ದೇಶ ವಿಭಜನೆಯ ಕ್ರೌರ್ಯದ ನೆನಪಿನ ದಿನ ಆಚರಿಸುವ ಅಗತ್ಯದ ಪರವಾಗಿ ಆರ್‌ಎಸ್ಎಸ್‌ನ ರಾಮ್‌ ಮಾಧವ್‌ ಚರ್ಚಿಸಿದ್ದಾರೆ (ಪ್ರ.ವಾ., ಆ. 21). ಅದರ ಅಗತ್ಯ ಇಲ್ಲ ಎಂಬುದು ನನ್ನ ಅಭಿಪ್ರಾಯ. ಬಿಜೆಪಿಯ ಈ ನಡೆಯು ಹಿಂದೂ ಮತಗಳ ಧ್ರುವೀಕರಣದ ಉದ್ದೇಶದಿಂದ ಕೂಡಿದೆ ಎಂದು ಚಿಕ್ಕ ಮಕ್ಕಳೂ ಹೇಳಬಹುದು. ಇದರಿಂದ ಹಿಂದೂ ಮತ್ತು ಮುಸ್ಲಿಂ ಪ್ರಜೆಗಳ ನಡುವೆ ದ್ವೇಷದ ಭಾವನೆ ಇನ್ನೂ ಹೆಚ್ಚಾಗುತ್ತದೆ.

ಈ ರೀತಿ ಜನರ ಭಾವನೆಗಳನ್ನು ಕೆದಕುವ ರಾಜಕೀಯದ ಅವಶ್ಯಕತೆಯಾದರೂ ಬಿಜೆಪಿಗೆ ಯಾಕೆ ಬೇಕು? ಅಷ್ಟಕ್ಕೂ ಹಿಂದೂಗಳಿಗೆ ಅನ್ಯಾಯವಾಗುವುದನ್ನು ತಡೆಯಬೇಕೆಂದಿದ್ದರೆ ‘ಸಮಾನ ನಾಗರಿಕ ಸಂಹಿತೆ’ ಜಾರಿಗೆ ತರಲಿ. ದೇಶದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನಿರಲಿ.

ರಾಮ್ ಮಾಧವರ ಗಾಢವಾದ ಕನಸಿನಂತೆ, ಈ ಎರಡು ದೇಶಗಳು ವಿಲೀನಗೊಳ್ಳುವುದು ಅಸಾಧ್ಯವಲ್ಲವೇ? ಪೂರ್ತಿ ವಿಲೀನ ಹಾಗಿರಲಿ, ಪಾಕಿಸ್ತಾನ ಹಾಗೂ ಚೀನಾ ಆಕ್ರಮಿತ ಕಾಶ್ಮೀರವನ್ನು ದಶಕಗಳು ಕಳೆದರೂ ವಶಪಡಿಸಿಕೊಳ್ಳಲು ಸಾಧ್ಯವಾಯಿತೇ?

-ಸತೀಶ ಎಂ.ಎಸ್. ಭಟ್ಟ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT