ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಜಯಂತಿಗೆ ಬಳಸುವ ಹಣ ಸದ್ವಿನಿಯೋಗವಾಗಲಿ

Last Updated 11 ಮೇ 2022, 22:15 IST
ಅಕ್ಷರ ಗಾತ್ರ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳುಗಳ ಅವಧಿಯಲ್ಲಿ ದಲಿತರು ಮತ್ತು ದಲಿತೇತರರು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೂ ಇಂದಿಗೂ ಹಳ್ಳಿಗಳಲ್ಲಿ ಜಾತಿ ತಾರತಮ್ಯ ಹೋಗಿಲ್ಲ. ದಲಿತರ ಮಕ್ಕಳು ಮೇಲ್ವರ್ಗದ ಹುಡುಗಿಯರನ್ನು ಮದುವೆಯಾದರೆ, ಹಾಡಹಗಲೇ ಭೀಕರ ಕೊಲೆಗಳು ಆಗುತ್ತವೆ, ಮರ್ಯಾದೆಗೇಡು ಹತ್ಯೆಗಳು ನಡೆಯುತ್ತವೆ. ಎಷ್ಟು ವರ್ಷಗಳ ಕಾಲ ಈ ಜಯಂತಿಯನ್ನು ಹೀಗೇ ಆಚರಿಸುವುದು. ಜಯಂತಿ ಆಚರಿಸಿ ಅಂಬೇಡ್ಕರ್ ಅವರನ್ನು ಕೊಂಡಾಡಿದರೆ ಸಾಲದು.

‘ನನ್ನ ಅನುಯಾಯಿ ಆಗಿ. ಆದರೆ ನನ್ನನ್ನು ಆರಾಧಿಸಬೇಡಿ’ ಎಂದಿದ್ದ ಅಂಬೇಡ್ಕರ್ ಅವರ ಮಾತನ್ನು ನಾವು ಮರೆತಿದ್ದೇವೆ. ಹೀಗೆ ನಾವು ವರ್ಷಕ್ಕೊಮ್ಮೆ ಜಯಂತಿಗಾಗಿ ವ್ಯರ್ಥ ಮಾಡುವ ಲಕ್ಷಾಂತರ ರೂಪಾಯಿಯನ್ನು ಒಂದೆಡೆ ಮೂಲ ಬಂಡವಾಳವಾಗಿ ತೊಡಗಿಸಿದರೆ, ಅದರಿಂದ ಬರುವ ಬಡ್ಡಿ ದರದಲ್ಲಿ ದಲಿತರ ಮಕ್ಕಳಿಗೆ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ನೀಡಬಹುದು. ಆಗ ಅವರಲ್ಲಿ ಸುಮಾರು ಮಂದಿ ಉನ್ನತ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಡಾ. ರಾಜಕುಮಾರ ಎಂ. ದಣ್ಣೂರ,ಅಫಜಲಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT