ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಜ್ಯೋತ್ಸವ ಪ್ರಶಸ್ತಿ: ಸುಧಾರಣೆ ಶ್ಲಾಘನೀಯ

Last Updated 2 ನವೆಂಬರ್ 2021, 21:45 IST
ಅಕ್ಷರ ಗಾತ್ರ

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ, ಆಯ್ಕೆ ಸಮಿತಿಯೇ ಸಾಧಕರನ್ನು ಗುರುತಿಸುತ್ತದೆ ಎಂಬುದನ್ನು ತಿಳಿದು ಹರ್ಷವಾಯಿತು. ಸ್ವಾಭಿಮಾನವುಳ್ಳ ಯಾವೊಬ್ಬ ಸಾಧಕನೂ ‘ನನಗೆ ಪ್ರಶಸ್ತಿ ಕೊಡಿ’ ಎಂದು ಅರ್ಜಿ ಸಲ್ಲಿಸಲು ಇಷ್ಟಪಡುವುದಿಲ್ಲ. ತನ್ನ ಸಾಧನೆಯನ್ನು ತಾನೇ ಬಿಂಬಿಸಿ ಅದನ್ನು ಅರ್ಜಿ ರೂಪದಲ್ಲಿ ಸಲ್ಲಿಸಲು ಕೆಲವರಿಗೆ ಮುಜುಗರ ಎನಿಸುತ್ತಿತ್ತು. ಆ ದಿಸೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ.

ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರು ಅರ್ಜಿ ಹಾಕುವ ಅನಿವಾರ್ಯವಿತ್ತು. ಎಷ್ಟೋ ಮಂದಿ ಗ್ರಾಮೀಣ ಭಾಗದ ಮುಗ್ಧ ಅನಕ್ಷರಸ್ಥ ಪ್ರತಿಭಾನ್ವಿತರಿಗೆ ಅರ್ಜಿ ಸಲ್ಲಿಸುವ ವಿಧಾನವೇ ತಿಳಿದಿರಲಿಲ್ಲ. ಇದರಿಂದಾಗಿ ಜನಪದ, ರಂಗಭೂಮಿ, ಇನ್ನಿತರ ಕ್ಷೇತ್ರಗಳ ಸಾಧಕರು ಪ್ರಶಸ್ತಿಯಿಂದ ವಂಚಿತರಾಗುತ್ತಿದ್ದರು. ಇನ್ನು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಾಗಿ ತೀವ್ರ ಸೆಣಸಾಟವೇ ನಡೆಯುತ್ತಿತ್ತು. ಈಗ ಸರ್ಕಾರ ಇಂತಹ ಸಮಸ್ಯೆಗಳನ್ನು ಮನಗಂಡು ಆಯ್ಕೆ ಸಮಿತಿಯ ಮೂಲಕ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ. ಬಹುಮಾನದ ಮೊತ್ತವನ್ನು ಹೆಚ್ಚಿಸಿರುವುದಲ್ಲದೆ, ವಯೋಮಿತಿ ನಿಯಮವನ್ನು ಸಡಿಲಿಸಿರುವುದು ಅಭಿನಂದನಾರ್ಹ.

ಪೆಮ್ಮನಹಳ್ಳಿ ಶ್ರೀನಾಥ್,ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT