ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನ್ಯಾಯ ಕೊಡಿಸಲು ಅಧಿಕಾರವೇ ಬೇಕೆ?

Last Updated 11 ಮೇ 2022, 22:15 IST
ಅಕ್ಷರ ಗಾತ್ರ

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆರೆಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇವೆ. ಆ ಕೆರೆಗಳಿಗೆ ಹಿಂದಿನ ವೈಭವವನ್ನು ಮರಳಿಸುತ್ತೇವೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 11). ನ್ಯಾಯ ಕೊಡಿಸಲು ಅಥವಾ ಅನ್ಯಾಯ ಎಸಗಿದವರನ್ನು ಜೈಲಿಗೆ ಕಳಿಸಲು ಅಧಿಕಾರವೇ ಬೇಕೆ? ಜನಸಾಮಾನ್ಯರಿಗಿಂತ ಜನಪ್ರತಿನಿಧಿಗಳಿಗೆ, ಮಾಜಿ ಮಂತ್ರಿಗಳಿಗೆ, ಮಾಜಿ ಮುಖ್ಯಮಂತ್ರಿಗಳಿಗೆ ಎಲ್ಲ ದಾಖಲೆಗಳೂ ಸುಲಭವಾಗಿ ದೊರಕುತ್ತವೆ. ಅವುಗಳನ್ನು ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ನೀಡಿ ಸಂಘಟಿತ ಹೋರಾಟ ಮಾಡುವ ಮೂಲಕ ಒತ್ತಡ ತಂದರೆ, ಕೆರೆಗಳ ವೈಭವ ತಂತಾನೇ ಮರುಕಳಿಸುತ್ತದೆ. ಒಬ್ಬ ಜನಸಾಮಾನ್ಯನಾಗಿಯೂ ಇದನ್ನು ಮಾಡಬಹುದು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ...’ ಎಂಬ ಹೇಳಿಕೆಯು ಅಧಿಕಾರ ಗಳಿಸುವುದಕ್ಕೆ ಮಾತ್ರ ಎಂಬುದು ಮೇಲ್ನೋಟಕ್ಕೇ ತಿಳಿಯುವ ವಿಚಾರ. ಸರ್ಕಾರದಿಂದ ಹೊರಗಿದ್ದುಕೊಂಡೂ ಜನಪರ ಕೆಲಸ ಮಾಡಬಹುದು ಎಂಬುದನ್ನು ತೋರಿಸಲಿ.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT