ವಾಚಕರ ವಾಣಿ: ಮಾತೃಭಾಷೆ: ವಿರೋಧಾಭಾಸದ ನಡೆ
‘ಜನರು ಬಹಳ ಹೆಮ್ಮೆಯಿಂದ ತಮ್ಮ ಮಾತೃಭಾಷೆಯನ್ನು ಮಾತನಾಡಬೇಕು. ಭಾಷಾ ಶ್ರೀಮಂತಿಕೆ ವಿಷಯದಲ್ಲಿ ಭಾರತವನ್ನು ಸರಿಗಟ್ಟುವ ದೇಶ ಮತ್ತೊಂದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ (ಪ್ರ.ವಾ., ಫೆ. 27).
ಅವರ ಈ ಹೇಳಿಕೆ ವಿರೋಧಾಭಾಸದಿಂದ ಕೂಡಿದೆ. ಕಾರಣ, ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದೆಂದೂ ಕಾಣದಂತೆ ಹಿಂದಿ ಹೇರಿಕೆ ನಡೆಯುತ್ತಿದೆ. ಹಿಂದಿ ಭಾಷಿಕರದ್ದಾದರೂ ಕೊಂಚ ಸಹಿಸಿಕೊಳ್ಳಬಹುದು ಮತ್ತು ಅವರಿಗೆ ಕನ್ನಡವನ್ನೂ ಕಲಿಸಬಹುದು. ಆದರೆ, ಕೇಂದ್ರ ಸರ್ಕಾರವೇ ಅವಕಾಶ ದೊರಕಿದ ಜಾಗದಲ್ಲೆಲ್ಲಾ ಹಿಂದಿ ಹೇರುತ್ತಿದೆ. ಈ ಬಲವಂತ ಹಿಂದಿ ಹೇರಿಕೆಯನ್ನು ನಿಲ್ಲಿಸಿ ನಂತರ ‘ಹೆಮ್ಮೆಯಿಂದ ಮಾತೃಭಾಷೆ ಮಾತನಾಡಿ’ ಎಂದು ಹೇಳಿದರೆ ಅದಕ್ಕೊಂದು ಅರ್ಥವಿದೆ. ಅದಿಲ್ಲದೆ ಕೇವಲ ಬಾಯಿಮಾತಿನಲ್ಲಿ ಇಂತಹ ಹೇಳಿಕೆಗಳನ್ನು ನೀಡಿದರೆ ಅದು ವಿರೋಧಾಭಾಸವೇ ಹೌದು.
ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.