ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆಮ್ಲಜನಕ ಪೂರೈಕೆ: ಅವಿವೇಕತನದ ನಡೆ

Last Updated 6 ಮೇ 2021, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲೇ ಉತ್ಪಾದನೆಯಾಗುವ ಆಮ್ಲಜನಕದ ಒಂದು ಪಾಲು ಬೇರೆ ರಾಜ್ಯಗಳಿಗೆ ಸರಬರಾಜಾ
ಗುತ್ತಿದ್ದು, ಈಗ ಇಲ್ಲಿನ ಅವಶ್ಯಕತೆಗೆ ದೂರದ ವಿಶಾಖಪಟ್ಟಣದಿಂದ ಆಮ್ಲಜನಕ ನಮಗೆ ಬರಬೇಕಾಗಿದೆ, ಇದು
ಅಸಂಬದ್ಧ ಎಂದು ಪತ್ರಿಕೆಯು ಸಂಪಾದಕೀಯದಲ್ಲಿ (ಪ್ರ.ವಾ., ಮೇ 6) ಟೀಕಿಸಿದೆ. ಆದರೆ, ಇದು ಅಸಂಬದ್ಧವಷ್ಟೇ ಅಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವಿವೇಕತನವನ್ನು ಸಹ ಎತ್ತಿ ತೋರಿಸುತ್ತದೆ. ನಮ್ಮ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆಯಾಗುತ್ತಿದ್ದ ಈ ಜೀವಪೋಷಕವನ್ನು ಬೇರೆ ರಾಜ್ಯಗಳಿಗೆ ಸಾಮಾನ್ಯ ಸಂದರ್ಭಗಳಲ್ಲಿ ವಿತರಿಸುತ್ತಿದ್ದುದು ಸಮಂಜಸವೇ ಸರಿ. ಆದರೆ ಈಗ ರಾಜ್ಯದಲ್ಲಿರುವುದು ಅತಿ ದಾರುಣವಾದ ಪರಿಸ್ಥಿತಿ. ರಾಜ್ಯದಲ್ಲಿ ಆಮ್ಲಜನಕದ ಗರಿಷ್ಠ ಪ್ರಮಾಣದ ಉತ್ಪಾದನೆಯೇ ನಮ್ಮ ಇಂದಿನ ಅಗತ್ಯವನ್ನು (1,792 ಟನ್ನುಗಳು) ಲೆಕ್ಕಕ್ಕೆ ಹಿಡಿದರೆ ಸುಮಾರು 750 ಟನ್ನುಗಳಷ್ಟು ಕಡಿಮೆ! ಹೀಗಿರುವಾಗ ಯಾವುದೋ ಸಂದರ್ಭದಲ್ಲಿ ಗೊತ್ತುಮಾಡಿದ್ದ ವ್ಯವಸ್ಥೆಗೇ ಜೋತುಬಿದ್ದು ‘ಮನೆಗೆ ಮಾರಿ...’ಯಾಗುವ ದಯನೀಯ ಸ್ಥಿತಿಯನ್ನು ರಾಜ್ಯವು ಮೈಮೇಲೆ ಹಾಕಿಕೊಂಡಿದೆ.

ಯಾವಾಗ ಇಲ್ಲಿನ ಅಗತ್ಯವು ನಮ್ಮ ಉತ್ಪಾದನೆಯ ಪ್ರಮಾಣವನ್ನು ಮೀರಿತೋ ಆಗಿನಿಂದಲೇ ರಾಜ್ಯ ಎಚ್ಚೆತ್ತುಕೊಳ್ಳದೆ ಹಿಂದಿನ ವ್ಯವಸ್ಥೆಗೇ ಕಟ್ಟುಬಿದ್ದು, ಈಗ ಕೇಂದ್ರದ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ತಂದುಕೊಂಡಿರುವುದು ಅವಿವೇಕವಲ್ಲದೆ ಮತ್ತೇನು? ಕೇವಲ ಆಮ್ಲಜನಕದ ಕೊರತೆಯಷ್ಟೇ ಅಲ್ಲ, ಲಸಿಕೆಗಳ ಕೊರತೆ ಕೂಡ ಬಾಯ್ದೆರೆದು ಒರಲುತ್ತಿದೆ. ನಮ್ಮ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರದ ವರಿಷ್ಠರ ಮುಂದೆ ಬಾಗಿ ನಿಲ್ಲಲೆಂದೇ ಇವರನ್ನು ಆಯ್ಕೆ ಮಾಡಿದ್ದು?

ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT