ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸಂತೂರ್‌ ಸವಿ ಉಣಿಸಿದ್ದ ಶಿಸ್ತುಗಾರ

Last Updated 10 ಮೇ 2022, 22:30 IST
ಅಕ್ಷರ ಗಾತ್ರ

ಪಂಡಿತ್‌ ಶಿವಕುಮಾರ ಶರ್ಮಾ ಅವರ ನಿಧನ ಸಂಗೀತ ಲೋಕಕ್ಕೆ ಆಘಾತ ತಂದಿದೆ. ಕಾಶ್ಮೀರದ ಪ್ರಸಿದ್ಧ ಶತ ತಂತ್ರಿ ವಾದ್ಯವನ್ನು ನವೀಕರಿಸಿ ‘ಸಂತೂರ್’ ಎಂದು ನಾಮಕರಣ ಮಾಡಿ ಸಂಗೀತ ಮತ್ತು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಶಿವಜಿ ಅವರದು.

ನಮ್ಮ ಹುಬ್ಬಳ್ಳಿ– ಧಾರವಾಡಕ್ಕೆ ಅವರು ಅನೇಕ ಸಾರಿ ಬಂದು ತಮ್ಮ ಸಂತೂರ್ ಸವಿಯನ್ನು ನಮಗೆಲ್ಲ ಉಣಿಸಿದ್ದಾರೆ. ಅಂತೆಯೇ ವೇದಿಕೆಯ ಮೇಲೆ ಅವರ ಶಿಸ್ತು, ಸಂಯಮ ಮತ್ತು ತಾಳ್ಮೆ ಅಭಿನಂದನೀಯ. ಅಂಥ ಮಹಾನ್ ಕಲಾವಿದ ಜನಿಸುವುದು ದುರ್ಲಭ. ನಾವೆಲ್ಲರೂ ಅವರನ್ನು ನೋಡಿದ್ದೇವೆ ಮತ್ತು ಅವರ ಸಂತೂರ್ ವಾದನವನ್ನು ಆಲಿಸಿದ್ದೇವೆ ಎಂಬುದೇ ನಮ್ಮ ಪುಣ್ಯ.

ಮುರುಗೇಶ್ ಹನಗೋಡಿಮಠ,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT