ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಭಾಷಾ ನಿಧಿ ಸಂರಕ್ಷಿಸೋಣ

Last Updated 24 ಆಗಸ್ಟ್ 2021, 21:15 IST
ಅಕ್ಷರ ಗಾತ್ರ

‘ಪರಂಪರೆಯ ಭಂಡಾರಕ್ಕೆ ಕೀಲಿಕೈ’ ಎಂಬ ಯೋಗಾನಂದ ಅವರ ಲೇಖನವನ್ನು (ಸಂಗತ, ಆ. 24)
ಓದಿ, ಸಂಸ್ಕೃತದ ಬಗ್ಗೆ ನಾನು ಆತ್ಮಾವಲೋಕನ ಮಾಡಿಕೊಂಡೆ. ಕಳೆದ ವಾರ ಚಂದನ ವಾಹಿನಿಯನ್ನು ವೀಕ್ಷಿಸುತ್ತಿದ್ದಾಗ, ವಾರ್ತೆಯು ಸಂಸ್ಕೃತದಲ್ಲಿ ಪ್ರಸಾರವಾಗುತ್ತಿತ್ತು. ನನಗೆ ಆಶ್ಚರ್ಯ. ಸಂಸ್ಕೃತದ ಬಗ್ಗೆ ಅಲ್ಪ ಜ್ಞಾನವಿದ್ದ ಕಾರಣ ಅದು ನನಗೆ ಮನನವಾಯಿತು. ಆದರೆ ನಮ್ಮ ತಾಯಿ, ‘ಅದು ಯಾವ ಭಾಷೆ’ ಎಂದು ಕೇಳಿದರು! ಇದು ನಮ್ಮ ಪಾರಂಪರಿಕ ಭಾಷೆಯ ಅವನತಿಗೆ ಹಿಡಿದ ಕೈಗನ್ನಡಿಯಾಗಿದೆ. ಸಂಸ್ಕೃತ ಮೃತ ಭಾಷೆಯಾಗಿಲ್ಲ, ನನ್ನ ಪ್ರಕಾರ ಮಿತ ಭಾಷೆಯಾಗಿದೆ.

ತಂತ್ರಜ್ಞಾನದ ಜಗತ್ತಿನಲ್ಲಿ ಇಂಗ್ಲಿಷ್‌ ಭಾಷೆಯ ದಾಳಿಯಿಂದ ಸಂಸ್ಕೃತ ಮರೀಚಿಕೆಯಾಗಿದೆ. ಇದು ನಮ್ಮ ಪೀಳಿಗೆಯ ಸ್ಥಿತಿ ಮಾತ್ರವಲ್ಲ. ಪ್ರಾಚೀನ ಕಾಲದಲ್ಲಿ ಸಂಸ್ಕೃತ ಅತ್ಯುನ್ನತ ವರ್ಗದವರ ಭಾಷೆಯಾಗಿತ್ತು. ಕೆಳವರ್ಗ
ದವರಿಗೆ ಕಲಿಯಲು ಅವಕಾಶ ನೀಡುತ್ತಿರಲಿಲ್ಲ. ಅವರು ಪ್ರಾಕೃತ ಭಾಷೆಗೆ ಸೀಮಿತವಾಗಿದ್ದರು. ಕಾರಣ ಜೈನ,
ಬೌದ್ಧ ಧರ್ಮಗಳ ಉನ್ನತಿಗೆ ಮಾರ್ಗ ದೊರಕಿತು. ಈಗ ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲೇ ಮೊದಲಿಗೆ
ಅಳವಡಿಸಲಾಗುತ್ತಿದೆ. ಇನ್ನಾದರೂ ಮಕ್ಕಳಿಗೆ ಸಂಸ್ಕೃತ ಭಾಷೆಯ ಕಡೆಗೆ ಒಲವು ಮೂಡುವಂತೆ ನೋಡಿಕೊಳ್ಳೋಣ. ಪಾರಂಪರಿಕ ಭಾಷಾ ನಿಧಿಯನ್ನು ಸಂರಕ್ಷಿಸೋಣ.

ಸ್ನೇಹಾ ರೆಡ್ಡಿ,ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT