ಅರ್ಹರಿಗೆ ಮುಚ್ಚಿದ ಮೀಸಲಾತಿ ಬಾಗಿಲು

‘ಐಎಎಸ್ ಅಧಿಕಾರಿಗಳ ಮಕ್ಕಳಿಗೂ ಮೀಸಲಾತಿ ಬೇಕೇ?’ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇದು ಬರೀ ಕಾನೂನು ವಿಚಾರವಲ್ಲ; ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಮರುಪರಿಶೀಲಿಸುವ ಸಂದರ್ಭವೂ ಆಗಿದೆ. ತಲೆಮಾರುಗಳಿಂದ ಮೀಸಲಾತಿಯ ಲಾಭ ಉಂಡು, ಸರ್ಕಾರದ ಉನ್ನತಮಟ್ಟದ ಆಡಳಿತಾತ್ಮಕ ಹುದ್ದೆಗಳಲ್ಲಿರುವ ಕುಟುಂಬಗಳ ಮಕ್ಕಳು ಸಹ ಮೀಸಲಾತಿ ಕೋಟಾದಡಿ ಸ್ಪರ್ಧಿಸುತ್ತಿ ದ್ದಾರೆ. ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು.

ಸಾಮಾಜಿಕ ನ್ಯಾಯ ಎಂದರೆ ಸದಾ ಒಂದೇ ಕುಟುಂಬಕ್ಕೆ ಸೌಲಭ್ಯ ಮುಂದುವರಿ ಸುವುದಲ್ಲ; ಅತಿ ಹಿಂದುಳಿದವರನ್ನು ಮೇಲಕ್ಕೆತ್ತುವುದಾಗಿದೆ. ಹಾಗಾಗಿ, ಸರ್ಕಾರದ ಉನ್ನತ ಅಧಿಕಾರಿಗಳು, ಶ್ರೀಮಂತ ರಾಜಕಾರಣಿಗಳು ಹಾಗೂ ಸ್ಥಿತಿವಂತರು ಸ್ವಯಂ ಪ್ರೇರಿತವಾಗಿ ಮೀಸಲಾತಿಯನ್ನು ಅವರದೇ ಸಮುದಾಯಕ್ಕೆ ಸೇರಿರುವ ಕಡುಬಡವ ರಿಗೆ ಬಿಟ್ಟು ಕೊಡುವ ಅಗತ್ಯವಿದೆ. ತಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಬೇಡವೆಂದು ಘೋಷಿಸುವ ಮೂಲಕ ಹೊಸ ಅಭಿಯಾನಕ್ಕೆ ನಾಂದಿ ಹಾಡಿ ಇತರರಿಗೂ ಮಾದರಿಯಾಗಬೇಕಿದೆ.

-ಶಿವರಾಜ್ ನಡಗೇರಿ, ಕಲಬುರಗಿ

ಎತ್ತಣ ಕ್ರೀಡಾಂಗಣ? ಎತ್ತಣ ಕೆಎಚ್ಬಿ?

ಕರ್ನಾಟಕ ಗೃಹ ಮಂಡಳಿಯ ಮೂಲೋದ್ದೇಶವು ಸ್ವಂತ ಮನೆ ಹೊಂದಬೇಕೆಂಬ ಜನರ ಕನಸನ್ನು ನನಸು ಮಾಡುವುದಾಗಿದೆ. ಈಗಿನ ತಂತ್ರಜ್ಞಾನ ಉತ್ಕರ್ಷದ ಪರ್ವದಲ್ಲೂ ಈ ಕನಸು ಈಡೇರಿಸಲು ಮಂಡಳಿಯು ದಶಕಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ಮೂರು ವರ್ಷದ ಹಿಂದೆ ಬೆಂಗಳೂರು ಹೊರ ವಲಯದ ದೇವನಹಳ್ಳಿ, ಹೊಸಕೋಟೆ ಆಜುಬಾಜಿನಲ್ಲಿ ನಿವೇಶನ ಅಭಿವೃದ್ಧಿ ಯೋಜನೆಗೆಂದು ಮಂಡಳಿಯು ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಪ್ರಾರಂಭಿಕ ಇಡುಗಂಟು ಪಡೆದಿದೆ. ಆದರೆ, ಆ ಯೋಜನೆ ಯಾವ ಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನೇ ನೀಡಿಲ್ಲ. ಈಗ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮಂಡಳಿ ಕೈಹಾಕಿರುವುದು ಸೋಜಿಗ. ಕ್ರೀಡಾಂಗಣಕ್ಕೂ ಕೆಎಚ್ಬಿಗೂ ಎತ್ತಣಿಂದೆತ್ತ ಸಂಬಂಧ?

-ರಮೇಶ್, ಬೆಂಗಳೂರು

ದೇವಾಲಯ ಪ್ರವೇಶ: ಬೇಕಿದೆ ಪರಿವರ್ತನೆ

ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯದ ಗದ್ದುಗೆ ಭಾಗದ ಗರ್ಭಗುಡಿ ಪ್ರದೇಶಕ್ಕೆ ಸ್ವಾಮೀಜಿಯೊಬ್ಬರು ಪ್ರವೇಶ ಮಾಡಿದ ಕಾರಣಕ್ಕೆ ದೇಗುಲವನ್ನು ಶುಚಿಗೊಳಿಸಿರುವುದು ವರದಿಯಾಗಿದೆ. ಇದು ಬಾಲಿಶವಾದ ನಡೆ ಹಾಗೂ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಒಬ್ಬ ಸ್ವಾಮೀಜಿ ದೇವರ ಮೇಲಿನ ಭಕ್ತಿಯಿಂದ ಗರ್ಭಗುಡಿಯ ಒಳಗೆ ಪ್ರವೇಶಿಸಿದ್ದೇ ತಪ್ಪು ಎಂದು ಆಡಳಿತಾಧಿಕಾರಿಯು ಹೋಮ ಹವನ ನಡೆಸಿರುವುದು ಅಕ್ಷಮ್ಯ. ಮನುಷ್ಯ ಮನುಷ್ಯರ ನಡುವಿನ ಇಂತಹ ತಾರತಮ್ಯವನ್ನು ಖಂಡಿಸಬೇಕಿದೆ.

-ಈ. ಬಸವರಾಜು, ಬೆಂಗಳೂರು

ಭೂಗಳ್ಳರ ದುರಾಸೆಗೆ ಅರಣ್ಯ ಆಪೋಶನ

ಚಿಕ್ಕಮಗಳೂರು ಜಿಲ್ಲೆಯಲ್ಲಿ 36,785 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿರು ವುದು ವರದಿಯಾಗಿದೆ. ಆ ಜಿಲ್ಲೆಯಲ್ಲಿ ಅರಣ್ಯ ಮಾತ್ರವಲ್ಲದೆ ಗೋಮಾಳ, ಸ್ಮಶಾನ ಭೂಮಿಯನ್ನೂ ಭೂಗಳ್ಳರು ಬಿಟ್ಟಿಲ್ಲ. ಇದರಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ದೊಡ್ಡ ಪ್ಲಾಂಟರ್ಗಳು ಸ್ವಂತವಾಗಿ ಇನ್ನೂರು ಎಕರೆ ಹೊಂದಿದ್ದರೆ, ಇನ್ನೂರು ಎಕರೆ
ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುತ್ತಾರೆ. ಆದರೆ, ಕಾಫಿ ಬೆಳೆಯುವುದ ರಿಂದ ನಷ್ಟವೆಂದು ಸದಾ ಹಲುಬುತ್ತಾರೆ. ಅಷ್ಟು ನಷ್ಟದ ಕೆಲಸಕ್ಕೆ ಅರಣ್ಯವನ್ನು ಕಬಳಿಸುವುದಾದರೂ ಏಕೆ? ಅರಣ್ಯ ಅತಿಕ್ರಮಣದ ತೆರವು ಮರೀಚಿಕೆಯಾಗಿದೆ.

-ಮಧುಸೂದನ್ ಬಿ.ಎಸ್. ಬೆಂಗಳೂರು

ಯುವಜನರ ಹಿತಾಸಕ್ತಿ ಪಕ್ಷಗಳಿಗೆ ಅಪಥ್ಯ

ಎಲ್ಲ ರಾಜಕೀಯ ಪಕ್ಷಗಳೂ ಯುವಜನರ ಹಿತ ಕಾಪಾಡುವಲ್ಲಿ ಸೋತು ಹೋಗಿವೆ. ನಿರುದ್ಯೋಗ ಅವರನ್ನು ಹಿಂಸಿಸುತ್ತಿದೆ. ಭ್ರಷ್ಟಾಚಾರ ಮತ್ತು ಕಾರ್ಪೊರೇಟ್ ಧಣಿಗಳಿಗೆ ಮಣೆ ಹಾಕುವಿಕೆಯು ಎಲ್ಲೆ ಮೀರಿದೆ. ಸಂಪತ್ತು ಕೆಲವೇ ಸಿರಿವಂತರ ಪಾಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಡೆಸಲು, ಉದ್ಧಟತನ ತೋರಲು ಸರ್ಕಾರವೇ ಅನುಮತಿ ನೀಡಿದಂತಿದೆ. ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಸಂವಿಧಾನದ ಆಶಯ ದಂತೆ ಯಾವ ಸರ್ಕಾರವೂ ಆಡಳಿತ ನಡೆಸುತ್ತಿಲ್ಲ. ಜೆನ್ ಝೀ ಕ್ರಾಂತಿ ಸರಿಯಾದ ಮಾರ್ಗ ಹಿಡಿದರೆ ದೇಶದ ಭವಿಷ್ಯ ಬದಲಾಗುವುದರಲ್ಲಿ ಅನುಮಾನವಿಲ್ಲ. ಆಗ ರಾಜಕಾರಣವನ್ನು ವೃತ್ತಿಯಾಗಿಸಿಕೊಂಡವರು ಮೂಲೆಗುಂಪಾಗುತ್ತಾರೆ.

-ಅಶೋಕ ಪ. ಹೊನಕೇರಿ, ಧಾರವಾಡ

ಕೇಂದ್ರ ಇಂಧನದ ಹೊರೆ ತಗ್ಗಿಸುವುದೆ?

ಕೇಂದ್ರ ಸರ್ಕಾರವು ಕಳೆದ ಎರಡು ವಾರಗಳ ಅಂತರದಲ್ಲಿ ನಾಲ್ಕು ಬಾರಿ ಇಂಧನದ ಬೆಲೆ ಏರಿಸಿದೆ. ಇದು ಸಾಮಾನ್ಯ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ದಿನನಿತ್ಯದ ಜೀವನ ನಿರ್ವಹಣೆಯೇ ಕಷ್ಟಕರ ವಾಗಿದೆ. 2014ರಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 91.50 ಡಾಲರ್ ಇದ್ದಾಗ ಪೆಟ್ರೋಲ್ ಪ್ರತಿ ಲೀಟರ್ಗೆ ₹72ಕ್ಕೆ ದೊರೆಯುತ್ತಿತ್ತು. 2019–20 ರಲ್ಲಿ ಕಚ್ಚಾತೈಲದ ಬೆಲೆ 57 ಡಾಲರ್ಗೆ ಇಳಿದಾಗ ಪೆಟ್ರೋಲ್ ಬೆಲೆಯನ್ನು ಇಳಿಸದೆ ₹73ರ ಆಸುಪಾಸಿನಲ್ಲೇ ಮಾರಾಟ ಮಾಡಲಾಯಿತು. ಈ ಅವಧಿ ಯಲ್ಲಿ ತೈಲ ಕಂಪನಿಗಳು ಹಾಗೂ ಸರ್ಕಾರ ಹೆಚ್ಚಿನ ಆದಾಯಗಳಿಸಿವೆ. ಆದರೆ, ಗ್ರಾಹಕರಿಗೆ ಕಚ್ಚಾತೈಲದ ಬೆಲೆ ಇಳಿಕೆಯ ಲಾಭವನ್ನು ವರ್ಗಾಯಿಸಿಲ್ಲ. ಹಾಗಾಗಿ, ಈಗಿನ ಬೆಲೆ ಏರಿಕೆಯ ಸಂದರ್ಭದಲ್ಲಿ ತೆರಿಗೆ ಕಡಿತಗೊಳಿಸುವ ಮೂಲಕ ಇಂಧನದ ಬೆಲೆ ಏರಿಕೆಯ ಹೊರೆಯನ್ನು ತಗ್ಗಿಸಬೇಕಿದೆ.

-ಬಿ.ಆರ್. ಮಂಜುನಾಥ ಬೆಂಡರವಾಡಿ, ಗುಂಡ್ಲುಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.