ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ನಾಡಿನ ಹಿರಿಮೆ ಕಾಪಾಡೋಣ

Last Updated 29 ಜುಲೈ 2022, 19:30 IST
ಅಕ್ಷರ ಗಾತ್ರ

ನಮ್ಮ ನಾಡಿನಲ್ಲಿ ಹಿಂಸೆಯ ವಾತಾವರಣ ಸೃಷ್ಟಿಯಾಗುತ್ತಿರುವುದು ಆತಂಕ ತಂದಿದೆ. ಈ ಹಿಂದೆ ವಚನಕಾರ ಬಸವಣ್ಣ ‘ದಯವೇ ಧರ್ಮದ ಮೂಲವಯ್ಯಾ’ ಎಂಬ ಸಂದೇಶ ಸಾರಿದ್ದರು. ವರಕವಿ ದ.ರಾ.ಬೇಂದ್ರೆ ‘ಜಗದೇಳಿಗೆ ಯಾಗುವುದಿದೆ ಕರ್ನಾಟಕದಿಂದೆ...’ ಎಂದು ಜಗತ್ತಿನ ಏಳ್ಗೆಗೆ ಕನ್ನಡನಾಡು ಮುನ್ನುಡಿ ಬರೆಯುತ್ತದೆ ಎಂದಿದ್ದರು.

ಇದೀಗ ನಾಡಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಈ ಮಹನೀಯರ ಸಂದೇಶಗಳಿಗೆ ಧಕ್ಕೆ ತರುವಂಥ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಮನದಟ್ಟಾಗುತ್ತದೆ. ಇದು ನಿಜಕ್ಕೂ ಕನ್ನಡಿಗರು ತಲೆತಗ್ಗಿಸುವಂತಹ ಸಂಗತಿ. ಇಂತಹ ಕೃತ್ಯಗಳಿಗೆ ಎಲ್ಲರೂ ಸೇರಿ ಕಡಿವಾಣ ಹಾಕಿ, ನಮ್ಮ ನಾಡಿನ ಹಿರಿಮೆಯನ್ನು ಕಾಪಾಡಬೇಕಿದೆ.

- ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT