ಮಂಗಳವಾರ, ನವೆಂಬರ್ 29, 2022
29 °C

ವಾಚಕರ ವಾಣಿ | ಮಹತ್ವದ ತೀರ್ಪು: ತಿಳಿವಳಿಕೆ ಮೂಡಿಸಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಿವಾಹಿತೆಯರೂ ಸೇರಿದಂತೆ ಎಲ್ಲ ಮಹಿಳೆಯರೂ ಭ್ರೂಣಕ್ಕೆ 24 ವಾರ ತುಂಬುವವರೆಗೆ ಸುರಕ್ಷಿತವಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ ಎಂಬ ಸುಪ್ರೀಂ ಕೋರ್ಟ್‌ ತೀರ್ಪು (ಪ್ರ.ವಾ., ಸೆ. 30) ಸ್ವಾಗತಾರ್ಹ. ಹಳ್ಳಿಗರು ಹಾಗೂ ಬುಡಕಟ್ಟು ಜನರಲ್ಲಿ ಅನಕ್ಷರತೆ ಇರುವುದರಿಂದ ಇಂತಹ ತೀರ್ಪುಗಳು ಅವರನ್ನು ತಲುಪುವುದು ತೀರಾ ಕಡಿಮೆ. ಅದಕ್ಕಾಗಿ, ಗ್ರಾಮೀಣ ಪ್ರದೇಶಗಳ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಪ್ರಮುಖ ತೀರ್ಪುಗಳ ಕುರಿತು ಜಾಹೀರಾತುಗಳನ್ನು ಬಿತ್ತರಿಸಬೇಕು. ಇದರಿಂದ ಅವು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ತಲುಪಲು ಅನುಕೂಲವಾಗುತ್ತದೆ.⇒

- ವೀರಪ್ಪ ಈಟಿ, ಯರಗುಪ್ಪಿ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು