ಗುರುವಾರ , ಆಗಸ್ಟ್ 22, 2019
26 °C

ಅಸುರ ಅಲ್ಲ, ದೈವ ಸ್ವರೂಪಿ

Published:
Updated:

ರಾಜ್ಯದ ಕೆಲವೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನು ಕೆಲವು ಸುದ್ದಿ ಮಾಧ್ಯಮಗಳು ಜಲಾಸುರ, ಜಲರಾಕ್ಷಸ, ವರುಣಾಸುರ ಎಂದೆಲ್ಲ ಕರೆಯುತ್ತಿವೆ. ಇದು ಸರಿ ಎನಿಸುವುದಿಲ್ಲ. ನೀರು, ನದಿಗಳು ಎಂದಿದ್ದರೂ ಸಕಲ ಜೀವರಾಶಿಗಳಿಗೆ ದೈವ ಸ್ವರೂಪ. ಮಹಾಮಳೆಗೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ. ಇದರಿಂದಾಗಿ ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ ಉಂಟಾಗುತ್ತದೆ.

ಈ ಎಲ್ಲ ಸಮಸ್ಯೆಗಳಿಗೆ ಮೂಲಕಾರಣ ಮಾನವ. ಮಳೆ ಇಲ್ಲದೆ ಬರ ಬಂದಾಗ ನೀರನ್ನು ಜಲದೇವತೆ ಎನ್ನುತ್ತೇವೆ. ಮಳೆಗಾಗಿ ಪ್ರಾರ್ಥಿಸುತ್ತೇವೆ. ಆದರೆ ಈಗ ಪ್ರಕೃತಿ ಮಾತೆ ಬೇಡ ಬೇಡವೆನ್ನುವಷ್ಟು ನೀರು ನೀಡುತ್ತಿದೆ. ಗಿಡಮರ ಬೆಳೆಸಿದರೆ ಜಾಗತಿಕ ತಾಪಮಾನ ಕಡಿಮೆಯಾಗಿ, ಪರಿಸರ ಸಮತೋಲನ ಉಂಟಾಗುತ್ತದೆ. ಆಗ ಮಾತ್ರ ಇಂತಹ ವಿಕೋಪಗಳು ಕಡಿಮೆಯಾಗಬಲ್ಲವು.

-ಲೋಲಕುಮಾರ ಎಚ್.ಎಲ್., ಸಾಗರ

Post Comments (+)