ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಕ್ಕೆ ಮಂಜಮ್ಮ ಜೀವನಚರಿತ್ರೆ: ಸ್ವಾಗತಾರ್ಹ ಕ್ರಮ

Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರ ಜೀವನಚರಿತ್ರೆ ‘ನಡುವೆ ಸುಳಿವ ಹೆಣ್ಣು’ ಅನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎಸ್ಸಿ ಕನ್ನಡ ವಿಷಯದ ಪಠ್ಯಕ್ರಮಕ್ಕೆ ಅಳವಡಿಸುವ ಕಾರ್ಯ ನಡೆದಿರುವುದನ್ನು ತಿಳಿದು ಸಂತೋಷವಾಯಿತು. ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದವರ ಪರಿಚಯವನ್ನು ಅವರ ಜೀವನದ ಏಳು-ಬೀಳು, ಸಾಧನೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವುದು ಉತ್ತಮವಾದ ಕಾರ್ಯ.

ಆದರೆ ಮಂಜಮ್ಮ ಅವರ ಜೀವನಚರಿತ್ರೆಯನ್ನು ಕೇವಲ ಬಿ.ಎಸ್ಸಿ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುವು ದಕ್ಕಿಂತ ಉಳಿದ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ಪಠ್ಯಕ್ರಮದಲ್ಲಿ ಅಳವಡಿಸುವುದು ಒಳ್ಳೆಯದು. ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವುದೂ ಅಪೇಕ್ಷಣೀಯ.‌

–ಸಂಪತ್ ಆಕಳವಾಡಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT