ಮಂಗಳವಾರ, ಜನವರಿ 26, 2021
20 °C

ಸಾಹಿತ್ಯದ ಒಲವಿಗೆ ಇರಲಿ ಆದ್ಯತೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಸ್ಥಾನಗಳಿಗೆ ಅನೇಕರು ಸ್ಪರ್ಧಿಸಲು ಬಯಸಿ ತಮ್ಮ ತಮ್ಮ ಗೆಲುವಿಗಾಗಿ ಪ್ರಚಾರ ಶುರು ಮಾಡಿದ್ದಾರೆ. ಬೇರೆ ಚುನಾವಣೆಗಳಂತೆ ಈ ಚುನಾವಣೆಯೂ ಹಣಬಲ, ಜಾತಿ, ಉಪಜಾತಿ ಬಲದಿಂದ ನಡೆದು, ಕನ್ನಡ ಸಾಹಿತ್ಯದ ಅಸ್ಮಿತೆಯನ್ನು ಹಾಳುಗೆಡಹುವುದು ಕನ್ನಡಿಗರಿಗೆ, ಕನ್ನಡ ಸಾಹಿತ್ಯಾಸಕ್ತರಿಗೆ ನೋವು ತರಿಸುವಂತಹದ್ದು.

ಹಿಂದಿನ ದಶಕಗಳ ಅಧ್ಯಕ್ಷರುಗಳನ್ನು ನೋಡಿದರೆ ಸಾಹಿತಿ, ಬರಹಗಾರರು, ಪತ್ರಕರ್ತರು ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆಗೆ ಇಳಿಯುವ ಅನೇಕರಲ್ಲಿ ಸಾಹಿತ್ಯದ ಆಸಕ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕಬೇಕಾದಂತಹ ಸ್ಥಿತಿ ಇದೆ. ರಾಜಕೀಯ ಕ್ಷೇತ್ರದ ಚುನಾವಣೆಗಳಂತೆ ಪಕ್ಷ, ಕಾರ್ಯಕರ್ತ, ರಾಜಕಾರಣಿಗಳ ಬೆಂಬಲ, ಮಠಾಧೀಶರ ಆಶೀರ್ವಾದದಂತಹ ರೀತಿಯಲ್ಲಿ ಚುನಾವಣೆ ನಡೆಯದೆ, ಕೊನೇಪಕ್ಷ ಅಭ್ಯರ್ಥಿಗಳು ಸಾಹಿತ್ಯದ ಕನಿಷ್ಠ ಓದಿನ ಅರ್ಹತೆಯನ್ನು ಹೊಂದಿದ್ದರೆ, ಸಾಹಿತ್ಯದ ಸಾಧ್ಯತೆಗಳನ್ನು ನಾಡಿಗೆ ನೀಡಬಲ್ಲರು. ಸಾಹಿತ್ಯ ಪರಿಷತ್ತಿನ ಘನತೆಯನ್ನು ಹೆಚ್ಚಿಸಬಲ್ಲರು. ಈ ದಿಸೆಯಲ್ಲಿ ಮತದಾರರ ಆಯ್ಕೆಯೂ ಸಾಹಿತ್ಯದ ಒಲವಿರುವವರ ಕಡೆ ಇರಲಿ.

– ಡಾ. ನಂದೀಶ್ವರ ದಂಡೆ, ಕೊಂಡನಾಯಕನಹಳ್ಳಿ, ಹೊಸಪೇಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.