ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಭಾಷೆಯಲ್ಲಿ ಸಂವಹನ ಸಾಧ್ಯವಾಗಲಿ

ಅಕ್ಷರ ಗಾತ್ರ

ಅಧಿಕ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದಾಗ, ಸಂಸಾರ ತಾಪತ್ರಯದ ಮಧ್ಯೆಯೂ ಅದೆಷ್ಟೋ ತಾಯಂದಿರು, ಸಹೋದರಿಯರು ಕೂಡಿಟ್ಟಿದ್ದ ಅಷ್ಟೋಇಷ್ಟೋ ಹಣವನ್ನು ಏನು ಮಾಡಬೇಕೆಂದು ತೋಚದೆ ತೊಳಲಾಡಿದ್ದನ್ನು ನೋಡಿದ್ದೇವೆ. ಇದಕ್ಕೆ ಕಾರಣ, ಅವರು ತಮ್ಮ ಉಳಿತಾಯಕ್ಕಾಗಿ ಬ್ಯಾಂಕಿಂಗ್ ಸೇವೆಯ ಮೊರೆ ಹೋಗದೆ ಮನೆಯ ಮಡಕೆ, ಕುಡಿಕೆಯನ್ನು ಅವಲಂಬಿಸಿದ್ದುದು. ಈ ಬಗೆಯ ಉಳಿತಾಯ ಅಸುರಕ್ಷಿತವೆಂದು ತಿಳಿದಿದ್ದರೂ ಅದು ಅವರಿಗೆ ಅನಿವಾರ್ಯವಾಗಿತ್ತು. ಏಕೆಂದರೆ ಬ್ಯಾಂಕಿಗೆ ಹೋಗಲು ಮುಜುಗರ, ಬ್ಯಾಂಕ್ ಸಿಬ್ಬಂದಿಯ ಅರ್ಥವಾಗದ ಭಾಷೆ, ಕೆಲವರ ಅನುಚಿತ ವರ್ತನೆ.

ಜನಧನ ಯೋಜನೆಯು ಅದೆಷ್ಟೋ ಬಡಕುಟುಂಬಗಳಿಗೆ ಬ್ಯಾಂಕ್‌ ಖಾತೆ ಹೊಂದುವ ಅವಕಾಶ ದೊರಕಿಸಿಕೊಟ್ಟಿತು. ಆದರೂ ಸಿಬ್ಬಂದಿಯ ಅರ್ಥವಾಗದ ಭಾಷೆಯಿಂದಾಗಿ ನಮ್ಮ ತಾಯಂದಿರಲ್ಲಿ ಹಿಂಜರಿಕೆ ಮಾತ್ರ ದೂರವಾಗಿಲ್ಲ. ಇಂತಹ ಸಾಮಾನ್ಯರೂ ಹಣಕಾಸು ವ್ಯವಸ್ಥೆಗೆ ಒಳಪಡುವಂತಾಗಬೇಕಾದರೆ ಬ್ಯಾಂಕ್‌ ಶಾಖೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಯುವಂತೆ ಆಗಬೇಕು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮಾತನಾಡಿರುವುದು ಸ್ವಾಗತಾರ್ಹ. ಅವರ ಮಾತು ಕಾರ್ಯರೂಪಕ್ಕೆ ಬರುವಂತಾಗಲಿ.

– ತುಕಾರಾಮ ಮ. ಅಹಿರಸಂಗ,ಇಂಗಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT