ಗುರುವಾರ , ಅಕ್ಟೋಬರ್ 29, 2020
20 °C

ಗಾಯದ ಮೇಲೆ ಉಪ್ಪು ಸವರಿದಂತಾಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ ಪರಿಣಾಮದಿಂದ ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಉದ್ಯಮದವರೆಗೆ ಎಲ್ಲರಿಗೂ ಆರ್ಥಿಕ ನಷ್ಟವಾಗಿದೆ. ಆದರೆ ಈ ನಷ್ಟವನ್ನು ಈಗಿನ ಅನ್‌ಲಾಕ್‌ ಸಂದರ್ಭದಲ್ಲಿ ತುಂಬಿಕೊಳ್ಳುವ ಸಲುವಾಗಿ, ಎಲ್ಲರೂ ಮೊದಲಿದ್ದ ಮೂಲಬೆಲೆಯನ್ನು ಹೆಚ್ಚಿಸಿದ್ದಾರೆ. ಇದು ಬಡತನವೆಂಬ ಗಾಯಕ್ಕೆ ಉಪ್ಪು ಸುರಿದಂತಿದೆ.

ಬಹಳಷ್ಟು ಬಡ ಕುಟುಂಬಗಳು ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿವೆ. ಲಾಕ್‌ಡೌನ್‌ ಮುಂಚೆ ಸಿಗುತ್ತಿದ್ದ ಕೂಲಿಯ ಮೊತ್ತದಲ್ಲಿ ಈಗಲೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಈ ಸಂದರ್ಭದಲ್ಲಿ ದವಸಧಾನ್ಯ ಒಳಗೊಂಡಂತೆ ಬೇರೆ ಎಲ್ಲ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದರಿಂದ ಅವರ ಜೀವನ ನಿರ್ವಹಣೆ ಮೇಲೆ ಹೊಡೆತ ಬಿದ್ದಿದೆ. ಬಡವರ ಬದುಕಿಗೆ ಆಸರೆಯಾಗುವ ಕಾರ್ಯಕ್ರಮಗಳ ಕುರಿತು ಸರ್ಕಾರ ಚಿಂತಿಸಲಿ.

- ನಾರಾಯಣ ಡಂಬಳಿ, ಕೋಹಳ್ಳಿ, ಅಥಣಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು