ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ... ಕೇಳುತ್ತಿದೆಯೇ ನಮ್ಮ ಅಹವಾಲು?

Last Updated 30 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

65 ವರ್ಷ ವಯಸ್ಸಿನ ಹಿರಿಯ ನಾಗರಿಕನಾದ ನಾನು, ಹತ್ತು ವರ್ಷಗಳಿಂದ ಶ್ರವಣಸಾಧನ ಉಪಯೋಗಿಸುತ್ತಿದ್ದೇನೆ. ₹80 ಸಾವಿರದ ಬೆಲೆಯ ನನ್ನ ಶ್ರವಣಸಾಧನಕ್ಕೆ ಕಾಲಕಾಲಕ್ಕೆ ಸರ್ವಿಸ್‌ನ ಅಗತ್ಯವಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಸರ್ವಿಸ್‌ ಪಡೆಯಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಶ್ರವಣಸಾಧನದ ಕ್ಲಿನಿಕ್‌ನಲ್ಲಿ ಸರ್ವಿಸ್‌ಗಾಗಿ ವಿಚಾರಿಸಿದಾಗ, ಲಾಕ್‌ಡೌನ್‌ನಿಂದ ಸರ್ವಿಸ್‌ ಮಾಡಲು ಸಾಧ್ಯವಿಲ್ಲ, ಆದರೆ ನೀವು ನಮ್ಮ ಬಳಿ ಹೊಸ ಶ್ರವಣಸಾಧನ ಪಡೆಯಬಹುದು ಎಂದು ಹೇಳಿದರು. ಅಷ್ಟೊಂದು ಬೆಲೆ ತೆತ್ತು ಒಬ್ಬರು ಎರಡೆರಡು ಸಾಧನಗಳನ್ನು ಹೊಂದಲು ಸಾಧ್ಯವೇ?

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಮ್ಮಂತಹ ಹಿರಿಯ ನಾಗರಿಕರ ದೈಹಿಕ ಅಂಗವೈಕಲ್ಯವನ್ನೇ ಬಂಡವಾಳ ಮಾಡಿಕೊಂಡು ಶೋಷಣೆ ಮಾಡಲಾಗುತ್ತಿದೆ. ಇಂತಹ ಅತ್ಯಗತ್ಯ ಉಪಕರಣಗಳ ಸೇವಾ ಸೌಲಭ್ಯವನ್ನು ಅಗತ್ಯ ಸೇವೆಯೆಂದು ಪರಿಗಣಿಸಿ, ಸರ್ಕಾರವು ಹಿರಿಯ ನಾಗರಿಕರ ನೆರವಿಗೆ ಬರಬೇಕು.

-ಟಿ.ವಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT