ಮಂಗಳವಾರ, ಜೂಲೈ 7, 2020
28 °C

ವಾಚಕರ ವಾಣಿ | ದಂಡ ವಸೂಲಿ ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ನಿಂದ ಜನರ ಜೀವನ ಸಂಕಷ್ಟದಲ್ಲಿದ್ದು, ಎಷ್ಟೋ ಮಂದಿ ಕೆಲಸವಿಲ್ಲದೆ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ, ರಾಜ್ಯ ಸರ್ಕಾರವು ಲಾಕ್‌ಡೌನ್‌ ಅವಧಿಯಲ್ಲಿ ಜಪ್ತಿ ಮಾಡಿದ ಸಾವ೯ಜನಿಕರ ವಾಹನಗಳನ್ನು ವಾಪಸ್‌ ನೀಡಲು ದಂಡ ವಿಧಿಸುತ್ತಿರುವುದು ಜನರ ಗಾಯದ ಮೇಲೆ ಬರೆ ಎಳೆಯುವಂತಹ ಕೆಲಸವಾಗಿದೆ. ಈ ನಿಧಾ೯ರ ಇಂತಹ ಸಂದಭ೯ದಲ್ಲಿ ಸರಿಯೇ?

ಕೆಲವರು ವಾಹನಗಳ ಮಾಲೀಕರಾಗಿದ್ದರೂ ಸದ್ಯದ ಸ್ಥಿತಿಯಲ್ಲಿ ಹಣವಿಲ್ಲದೇ ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಸಹಾಯ ಮಾಡುವ ಬದಲು, ಜನರಿಂದಲೇ ಹಣ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ಆದ್ದರಿಂದ ಸರ್ಕಾರವು ಜನರಿಂದ ದಂಡ ವಸೂಲಿ ಮಾಡದೆ ಅವರ ವಾಹನಗಳನ್ನು ಹಿಂದಿರುಗಿಸಬೇಕು.

–ಇಫಾ೯ನ್, ರೋಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು