ಭಾನುವಾರ, ಸೆಪ್ಟೆಂಬರ್ 26, 2021
28 °C

ಲಾಕ್‌ಡೌನ್‌: ಪ್ರಬುದ್ಧ ನಿಲುವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ವಾರಾಂತ್ಯದ ಲಾಕ್‍ಡೌನ್ ಜಾರಿಗೊಳಿಸಿರುವುದು ಅನಿವಾರ್ಯವೇನೂ ಆಗಿರಲಿಲ್ಲ. ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಕೋವಿಡ್ ರೋಗಲಕ್ಷಣಗಳು ಹೆಚ್ಚಿರುವುದರಿಂದ ಆ ಭಾಗದ ಗಡಿ ಭದ್ರತೆಯನ್ನು ಅತ್ಯಂತ ಕಠಿಣವಾಗಿ ನಿರ್ವಹಿಸಿದರಷ್ಟೇ ಸಾಕಾಗಿತ್ತು. ವಾರಾಂತ್ಯದ ಎರಡು ದಿನಗಳಲ್ಲಿ, ನೆರೆ ರಾಜ್ಯಗಳೊಂದಿ‌ಗಿನ ಗಡಿ ಪ್ರವೇಶ ದ್ವಾರಗಳನ್ನು ಬಂದ್ ಮಾಡಬಹುದಾಗಿತ್ತು. ಅದುಬಿಟ್ಟು ಈ ಜಿಲ್ಲೆಗಳನ್ನು ವಾರಾಂತ್ಯದ ಲಾಕ್‍ಡೌನ್‍ಗೆ ಒಳಪಡಿಸಿರುವುದರಿಂದ, ಇದೀಗ ತಾನೆ ಚೇತರಿಸಿಕೊಳ್ಳುತ್ತಿರುವ ಇಲ್ಲಿನ ವ್ಯಾಪಾರ-ವಹಿವಾಟಿಗೆ, ಜನಜೀವನಕ್ಕೆ ಇನ್ನಷ್ಟು ಹೊಡೆತ ಕೊಟ್ಟಂತಾಗಿದೆ. ಆಡಳಿತವರ್ಗ ಪ್ರಬುದ್ಧತೆ ತೋರಲಿ.

ಹೊರೆಯಾಲ ದೊರೆಸ್ವಾಮಿ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು