ಸ್ವಾರಸ್ಯಕರ ಸಂಗತಿಗಳ ಅನಾವರಣ

ಬುಧವಾರ, ಏಪ್ರಿಲ್ 24, 2019
33 °C

ಸ್ವಾರಸ್ಯಕರ ಸಂಗತಿಗಳ ಅನಾವರಣ

Published:
Updated:

ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯಲ್ಲಿ ಅಪರೂಪದ ಮತ್ತು ಹಳೆಯ ಚಿತ್ರಗಳನ್ನು ಪ್ರಕಟಿಸಲಾಗುತ್ತಿದೆ.

40–50 ವರ್ಷಗಳ ಹಿಂದಿನ ಚುನಾವಣೆಯ ಕೆಲವು ನೆನಪುಗಳು, ಸ್ವಾರಸ್ಯಕರ ಸಂಗತಿಗಳನ್ನು ಓದುಗರ ಮುಂದಿಡಲಾಗುತ್ತಿದೆ. ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ 1978ರಲ್ಲಿ ಸ್ಪರ್ಧಿಸಿದ್ದಾಗಿನ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಿರಿಯ ರಾಜಕಾರಣಿ ಬಿ.ಎ.ಮೊಯಿದ್ದೀನ್‌ ಅವರು ಬರೆದಿರುವ ‘ನನ್ನೊಳಗಿನ ನಾನು’ ಆತ್ಮಕಥೆಯಿಂದ ಹೆಕ್ಕಿ ಬರೆಯಲಾಗಿದೆ. ನೆಹರೂ ಅವರ ಆಪ್ತರನ್ನು ವಿಜಯಪುರ ಕ್ಷೇತ್ರದಿಂದ ಸುಗಂಧಿ ಮುರುಗೆಪ್ಪಣ್ಣನವರ ಪರಾಭವಗೊಳಿಸಿದ ಸಂಗತಿಯೂ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈ ಘಟನೆಯನ್ನು ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಈ ಹಿಂದಿನ ಚುನಾವಣೆಯ ಅನೇಕ ಸ್ವಾರಸ್ಯಕರ ಸಂಗತಿಗಳು ನಮಗೆ ಜೀವನಚರಿತ್ರೆಗಳು/ಆತ್ಮಕಥೆಗಳಿಂದ ತಿಳಿದುಬರುತ್ತವೆ. ಇವು ನಮ್ಮ ಚುನಾವಣೆಯ ಐತಿಹಾಸಿಕ ಘಟನಾವಳಿಗಳನ್ನು ಕಟ್ಟಿಕೊಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !