ನನ್ನ ವೋಟಿಂದು ದುಡ್ಡು ತಗದಿಟ್ಟುಕೋ...

ಶನಿವಾರ, ಏಪ್ರಿಲ್ 20, 2019
24 °C

ನನ್ನ ವೋಟಿಂದು ದುಡ್ಡು ತಗದಿಟ್ಟುಕೋ...

Published:
Updated:

ಮೊನ್ನೆ ರಜೆಗೆಂದು ಊರಿಗೆ ಬಂದಿದ್ದೆ. ನನ್ನ ಅಣ್ಣನ ಮಗಳು ಗಂಡನ ಮನೆಯಿಂದ ತವರಿಗೆ ಬಂದಿದ್ದಳು. ಇಬ್ಬರೂ ಹರಟುತ್ತಾ ಕುಳಿತಿದ್ದಾಗ ಅವಳ ಗಂಡನ ಫೋನ್‌ ಕಾಲ್ ಬಂತು. ಆತನೊಂದಿಗೆ ಮಾತನಾಡುತ್ತಿದ್ದವಳು ‘ನಮ್ಮನಿಗೆ ಯಾವ ಪಾರ್ಟಿಯವರು ಬಂದಿದ್ರು?’ ಎಂದು ಕೇಳಿದಳು. ಅವನ ಉತ್ತರ ಏನಾಗಿತ್ತೋ ಗೊತ್ತಾಗಲಿಲ್ಲ. ನಂತರ ಆಕೆ ‘ಯಾರಾದರೂ ಬರಲಿ, ನನ್ನ ವೋಟಿಂದು ದುಡ್ಡು ತಗದಿಟ್ಟುಕೋ. ನನ್ನ ಹೆಂಡತಿ ತವರಿಗೆ ಹೋಗಿದ್ದಾಳೆ, ಬಂದು ವೋಟ್ ಹಾಕ್ತಾಳೆ ಅಂತ ಹೇಳು’ ಅಂದಳು. ಆ ಮಾತನ್ನು ಕೇಳಿದ ತಕ್ಷಣ ನನ್ನ ಹೊಟ್ಟೆ ರುಮ್ ಅಂದಿತು. ಅವಳು ಫೋನ್ ಇಡುವುದನ್ನೇ ಕಾಯುತ್ತಿದ್ದವಳು ‘ಸೆಕೆಂಡ್ ಪಿಯುಸಿ ಓದಿದ್ದೀಯ. ನಿಮ್ಮ ಮನೆಯಲ್ಲಿ ಎಲ್ಲರೂ ಓದಿದವರು. ಹೀಗಿದ್ದೂ ನಿನ್ನ ಮತವನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದೀಯಲ್ಲ ನಾಚಿಕೆಯಾಗುವುದಿಲ್ಲವೇ?’ ಎಂದು ಜಾಡಿಸಿದೆ.

ಮತ ಮಾರಿಕೊಳ್ಳುವುದು ನನ್ನ ತಲೆಮಾರಿನಿಂದ ಬದಲಾಗುತ್ತದೆ ಅಂದುಕೊಂಡಿದ್ದ ನನ್ನ ನಿರೀಕ್ಷೆ ಹುಸಿಯಾಗಿದೆ. ಇಲ್ಲಿ ಯಾರದು ತಪ್ಪು? ಈ ದೇಶದ ಜನರು ಮತ ಮಾರಿಕೊಂಡು ತಿನ್ನುವಷ್ಟರ ಮಟ್ಟಿಗೆ ಬಡತನದಿಂದ ಬಳಲುತ್ತಿದ್ದಾರೋ? ಇಲ್ಲವೇ ನಮ್ಮ ನಾಯಕರು ಮತವನ್ನು ಮಾರಿಕೊಂಡು ಬದುಕಿರಿ ಎಂದು ಪ್ರೇರಣೆ ನೀಡುತ್ತಿದ್ದಾರೋ?

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !