ಬೆಳಕಿನ ವ್ಯವಸ್ಥೆ ಇರಲಿ

ಶುಕ್ರವಾರ, ಏಪ್ರಿಲ್ 19, 2019
27 °C

ಬೆಳಕಿನ ವ್ಯವಸ್ಥೆ ಇರಲಿ

Published:
Updated:

ಲೋಕಸಭಾ ಚುನಾವಣೆಯಲ್ಲಿ ಸಮರ್ಪಕ ಮತದಾನಕ್ಕಾಗಿ ಚುನಾವಣಾ ಆಯೋಗವು ಹಲವಾರು ವ್ಯವಸ್ಥೆಗಳನ್ನು ಕಲ್ಪಿಸಿದೆ. ಶಾಲಾ ಕಾಲೇಜುಗಳಲ್ಲಿಯೇ ಬಹುತೇಕ ಮತಗಟ್ಟೆಗಳು ಸ್ಥಾಪನೆಗೊಂಡಿವೆ. ಯಥಾಪ್ರಕಾರ ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್ ದೀಪದ ಅನುಕೂಲ ಅಲಭ್ಯ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಿನಲ್ಲಿ ಸಂಜೆ ಮೋಡದಿಂದಾಗಿ ಬೆಳಕು ಮಸುಕಾಗುತ್ತದೆ. ತತ್ಪರಿಣಾಮ, ಮತಯಂತ್ರಗಳ ಬಳಿ ಸಾಕಷ್ಟು ಬೆಳಕು ಬರುವುದಿಲ್ಲ.

ಕಳೆದ ಚುನಾವಣೆಯಲ್ಲಿ ನನಗೆ ಆದ ಅನುಭವವನ್ನು ಮತಗಟ್ಟೆ ಅಧಿಕಾರಿಗೆ ವಿನಂತಿಸಿದರೂ, ‘ಈಗಾಗಲೇ 4 ಗಂಟೆ, ಇನ್ನೇನು ಮತದಾನದ ಸಮಯವೇ ಮುಗಿಯುತ್ತಾ ಬಂದಿತಲ್ಲ, ಹೋಗಲಿ ಬಿಡಿ ಸರ್’ ಎಂದು ಉತ್ತರಿಸಿದರೇ ಹೊರತು, ಬೆಳಕಿನ ವ್ಯವಸ್ಥೆಗೆ ಏನೂ ಕ್ರಮ ಕೈಗೊಳ್ಳಲಿಲ್ಲ. ಮಂದಬೆಳಕಿನಿಂದಾಗಿ ಅಭ್ಯರ್ಥಿಗಳ ಚಿಹ್ನೆಗಳು, ಹೆಸರು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹೀಗಾಗಿ ಆಯೋಗವು ಈ ಕುರಿತು ಈಗಲೇ ಸೂಕ್ತ ಯೋಜನೆಯನ್ನು ರೂಪಿಸಿ, ಅಗತ್ಯ ಕ್ರಮ ಕೈಗೊಳ್ಳಲಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !