ಕಬಳಿಕೆಗೆ ಕಡಿವಾಣ

7

ಕಬಳಿಕೆಗೆ ಕಡಿವಾಣ

Published:
Updated:

ಕಬಳಿಕೆಗೆ ಕಡಿವಾಣ

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿರುವುದು ಒಳ್ಳೆಯ ಬೆಳವಣಿಗೆ. ಈ ಮಸೂದೆಗೆ, ರಾಜ್ಯಸಭೆ
ಯಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯರು ತಡೆಯೊಡ್ಡಿ, ಕೆಲವು ತಿದ್ದುಪಡಿಗಳನ್ನು ಸೂಚಿಸಿದ್ದರು. ಅಂತೂ 15 ತಿಂಗಳ ಹಗ್ಗ ಜಗ್ಗಾಟಕ್ಕೆ ಈಚೆಗೆ ತೆರೆಬಿದ್ದು, ಒಬಿಸಿಗಳು ನಿಟ್ಟುಸಿರು ಬಿಡುವಂತಾಗಿದೆ.

ಆಯೋಗಕ್ಕೆ ಸಾಂವಿಧಾನಿಕ ಮನ್ನಣೆ ಲಭಿಸಿದ್ದರಿಂದ ಬಲಿಷ್ಠ ಜಾತಿಗಳು ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯವನ್ನು ಕಬಳಿಸುವುದಕ್ಕೆ ಕಡಿವಾಣ ಬಿದ್ದಂತಾಗಿದೆ. ಎನ್‌ಸಿಬಿಸಿಗೆ ಸಿವಿಲ್ ನ್ಯಾಯಾಲಯಕ್ಕೆ ಸಮಾನವಾದ ಅಧಿಕಾರ ದೊರೆಯಲಿದ್ದು, ರಾಷ್ಟ್ರೀಯ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ ಆಯೋಗಕ್ಕಿರುವಷ್ಟೆ ಮಹತ್ವ ಬರಲಿದೆ

ವೈ. ಯಮುನೇಶ್, ಹೊಸಪೇಟೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !