ಶನಿವಾರ, ನವೆಂಬರ್ 28, 2020
19 °C

ಆಮಿಷಕ್ಕೆ ಒಳಗಾಗುವವರು ಎಲ್ಲೆಡೆ ಇದ್ದಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಸಂದರ್ಭದಲ್ಲಿ ಮದ್ಯ ನಿಷೇಧವನ್ನು ಜಾರಿಗೊಳಿಸಿದ ಬಗ್ಗೆ ಬಿಂಡಿಗನವಿಲೆ ಭಗವಾನ್‌ ವಿಷಾದ ವ್ಯಕ್ತಪಡಿಸಿದ್ದಾರೆ (ವಾ.ವಾ., ಅ. 29). ಶಿಕ್ಷಕರು ಮದ್ಯದ ಆಮಿಷಕ್ಕೆ ಒಳಗಾಗುವವರಲ್ಲ ಎಂದು ಅವರು ನಂಬಿದ್ದಾರೆ. ಆದರೆ ಎಲ್ಲ ಇಲಾಖೆಗಳಲ್ಲೂ ಇರುವ ಹಾಗೆ ಶಿಕ್ಷಣ ಇಲಾಖೆಯಲ್ಲೂ ಕುಡುಕರುಇದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಲು ವೇದಿಕೆ ಏರಿದ ಶಿಕ್ಷಕರೊಬ್ಬರ ಕುಡುಕತನ ಅಲ್ಲೇ ಬಯಲಾಗಿತ್ತು. ಕಳೆದ ಬಾರಿ ಇದೇ ಚುನಾವಣೆಯಲ್ಲಿ ಕುಡುಕ ಮತದಾರರ ನಡುವೆ ಮಾರಾಮಾರಿಯಾಗಿತ್ತು. ಇಂತಹ ಕ್ವಚಿತ್ ಘಟನೆಗಳಿದ್ದರೂ ಸರ್ಕಾರದ ಮುಂದಾಲೋಚನೆ ಸರಿ ಎನಿಸುತ್ತದೆ.

ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು