ಭಾನುವಾರ, ಆಗಸ್ಟ್ 14, 2022
20 °C

ಚುನಾಯಿತ ಸದಸ್ಯರ ಕಡೆಗಣನೆ ಅನರ್ಥಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿದೆ. ಈಗ ಅದಕ್ಕೆ ‘ಸ್ಥಳ ಹಾಗೂ ರೂಪದಲ್ಲಿ ಒಂದಿಷ್ಟು ಬದಲಾವಣೆಯೊಂದಿಗೆ’ ಎಂಬ ಷರತ್ತನ್ನು ಸೇರಿಸಬಹುದಷ್ಟೆ. ಪಕ್ಕದ ಆಂಧ್ರಪ್ರದೇಶದಲ್ಲಿ ಎನ್‌ಟಿಆರ್ ಕಾಲದಲ್ಲಿ ಅವರ ಅಳಿಯ ಇತರರೊಂದಿಗೆ ಸೇರಿ ತಮ್ಮದೇ ಅಸಲಿ ತೆಲುಗುದೇಶಂ ಎಂದು ಘೋಷಿಸಿಕೊಂಡು, ಅದು ನ್ಯಾಯಾಲಯದಲ್ಲಿ ಊರ್ಜಿತವೂ ಆಗಿತ್ತು. ಈಗ ಅವರು ಹಾಗೂ ಆ ಪಕ್ಷ ಬಲಹೀನವಾಗಿದೆ. ವ್ಯಕ್ತಿಯ ಜನಪ್ರಿಯತೆಯ ಆಧಾರದ ಮೇಲೆ ಪಕ್ಷವೊಂದು ಅಧಿಕ ಸಂಖ್ಯೆಯ ವಿಧಾನಸಭಾ ಸದಸ್ಯ ಸ್ಥಾನಗಳನ್ನು ಗೆದ್ದ ನಂತರ ಒಂದು ಕುಟುಂಬ ಮತ್ತು ಕೆಲವು ಆಪ್ತರು ಸರ್ಕಾರವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ಚುನಾಯಿತ ಸದಸ್ಯರನ್ನು ಕಡೆಗಣಿಸುವುದು ಈಗ ಹೆಚ್ಚು ಅನರ್ಥಕಾರಿ.

ಹಿಂದೆ ಬಾಳಾಸಾಹೇಬ ಠಾಕ್ರೆ ಅವರ ರಾಜಕೀಯ ವಾರಸುದಾರ ಯಾರು ಎಂಬ ಮೇಲಾಟದಲ್ಲಿ ರಾಜ್ ಠಾಕ್ರೆ ಸೋತು ಮೂಲೆಗುಂಪಾಗಿದ್ದರು. ಆಗ ಗೆದ್ದವರು ಈಗ ಬೇರೆಯವರಿಗೆ ಸೋಲಬಹುದು. ಮುಂಬೈ ಟು ಸೂರತ್ ಟು ಗುವಾಹಟಿ ಪ್ರವಾಸ ಹೋದ ಮಹಾರಾಷ್ಟ್ರದ ಶಾಸಕರು ವಿಜಯ ಖಾತರಿಯ ಸಂಕೇತ ಸಿಕ್ಕಾಗ ಮಾತ್ರ ಹಿಂತಿರುಗಬಹುದು. ಆತಿಥ್ಯದ ವೆಚ್ಚವನ್ನು ಹೇಗೆ ಭರಿಸಲಾಗುತ್ತಿದೆ? ವಿಕಾಸ ಅಘಾಡಿ ಅವಧಿಯಲ್ಲಿ ನಿಜಕ್ಕೂ ವಿಕಾಸ ಎಷ್ಟಾಗಿದೆ? ಮೂಲಭೂತವಾಗಿ ಪ್ರಾದೇಶಿಕ ಆದ ಪಕ್ಷವೊಂದು ಕುಟುಂಬ ಕೇಂದ್ರಿತ– ನಿಯಂತ್ರಿತ ಆದಲ್ಲಿ ಏನಾಗಬಹುದು ಎಂದು ಕರ್ನಾಟಕದ ಮತದಾರರೂ ಯೋಚಿಸಬೇಕಾಗಿದೆ.

-ಎಚ್.ಎಸ್.ಮಂಜುನಾಥ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.