ಮಹಿಷ ಪ್ರತಿಮೆ: ಐತಿಹ್ಯ ಬದಲಾದೀತೇ?

7

ಮಹಿಷ ಪ್ರತಿಮೆ: ಐತಿಹ್ಯ ಬದಲಾದೀತೇ?

Published:
Updated:

‘ರಾಕ್ಷಸ ರೂಪದ ಮಹಿಷ ಪ್ರತಿಮೆ ಕೆಡವಿ, ಬೌದ್ಧ ಭಿಕ್ಕುವಿನ ರೂಪದ ಪ್ರತಿಮೆ ನಿರ್ಮಿಸಿ’ (ಪ್ರ.ವಾ., ಅ.4) ಎಂದು ಪ್ರೊ. ಕೆ.ಎಸ್. ಭಗವಾನ್ ‘ಅಪ್ಪಣೆ’ ಕೊಡಿಸಿದ್ದಾರೆ.

ಪ್ರತಿಮೆ ಬದಲಾಯಿಸಿದ ತಕ್ಷಣ ಅದರ ಹಿಂದಿರುವ ಐತಿಹ್ಯ, ಔಚಿತ್ಯಗಳು ಬದಲಾಗುತ್ತವೆಯೇ? ನಮ್ಮ ದೇಶದ ಉದ್ದಗಲಕ್ಕೂ ಪುರಾಣ, ಇತಿಹಾಸ ಆಧರಿತ ಮಠ–ಮಂದಿರ, ಸೌಧಗಳು ಯಥೇಚ್ಛವಾಗಿವೆ. ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ಇಂಥ ಪ್ರತಿಮೆಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನವನ್ನು ಹಿಂದಿನವರು ಮಾಡಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಂಥವುಗಳನ್ನು ವಿರೋಧಿಸುವವರು ಸಮಾನ ಮನಸ್ಕರೊಂದಿಗೆ ಸೇರಿ ತಮ್ಮದೇ ಆದ ಹೊಸ ಪುರಾಣ ಕಥೆ, ಪ್ರತಿಮೆಗಳನ್ನು ಸೃಷ್ಟಿಸಬಹುದು.

ಆದರೆ ಇಂಥ ಮೂರ್ತಿ ಅಥವಾ ಸೌಧಗಳ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ಸಹಾಯ ಪಡೆಯುವುದು ಸರಿ ಎನಿಸದು. ಏಕೆಂದರೆ ಭಗವಾನ್‌ ಅವರು, ‘ಮೈಸೂರಿನ ಅಂದಿನ ಮಹಾರಾಜರು ಪುರೋಹಿತಶಾಹಿಗಳ ಮಾತು ಕೇಳಿ ರಕ್ಕಸ ಸ್ವರೂಪದ ಮಹಿಷನ ಪ್ರತಿಮೆ ನಿರ್ಮಿಸಿದ್ದರು’ ಎಂದು ಹೇಳಿದ್ದಾರೆ.

-ರಮೇಶ್ ಉತ್ತರಹಳ್ಳಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !