ಅದ್ಧೂರಿ ಸಮಾವೇಶದಿಂದ ಉಪಯೋಗವಿಲ್ಲ

ಸೋಮವಾರ, ಏಪ್ರಿಲ್ 22, 2019
29 °C

ಅದ್ಧೂರಿ ಸಮಾವೇಶದಿಂದ ಉಪಯೋಗವಿಲ್ಲ

Published:
Updated:

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜನಬಲ ತೋರಿಸಲು ಅತೀ ಹೆಚ್ಚು ಜನರನ್ನು ಸೇರಿಸುವಂತೆ ಜಿಲ್ಲೆಯ ಶಾಸಕರು ಹಾಗೂ ಕಾರ್ಯಕರ್ತರಿಗೆ ನಾಯಕರ ಆಜ್ಞೆಯಾಗಿದೆಯಂತೆ. ಆದರೆ ಈ ಸಂದರ್ಭದಲ್ಲಿ, ಅಂದು ದುಡಿದು ಅಂದೇ ತಿನ್ನುವ ಸಾಮಾನ್ಯ ವರ್ಗ, ತಳ್ಳುಗಾಡಿ ವ್ಯಾಪಾರಸ್ಥರು, ತುರ್ತು ಚಿಕಿತ್ಸೆ ಸಲುವಾಗಿ ವಾಹನಗಳಲ್ಲಿ ಸಂಚರಿಸುವವರು ಈ ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು, ಅವರಿಗೆ ತೊಂದರೆಯಾಗದ ರೀತಿ ಸಮಾವೇಶ ನಡೆಯಲಿ. ಏಕೆಂದರೆ, ಅದ್ಧೂರಿ ಸಮಾವೇಶಗಳಿಂದ ಇಂತಹ ಬಡಪಾಯಿಗಳಿಗೆ ಹೆಚ್ಚು ತೊಂದರೆಯಾಗುತ್ತದೆಯೇ ಹೊರತು ನಯಾ ಪೈಸೆ ಉಪಯೋಗವಂತೂ ಆಗಲಾರದು.

-ಚೇತನ ಜೈನ್ ಎಸ್.ಎಸ್., ಮಂಡ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !