ಅಭಿಮಾನ ಅತಿರೇಕಕ್ಕೆ ಹೋಗದಿರಲಿ

ಗುರುವಾರ , ಏಪ್ರಿಲ್ 25, 2019
33 °C

ಅಭಿಮಾನ ಅತಿರೇಕಕ್ಕೆ ಹೋಗದಿರಲಿ

Published:
Updated:

ಮಂಡ್ಯ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷತೇರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್‌ ಅವರ ಅಭಿಮಾನಿಗಳು ತಮ್ಮ ತಮ್ಮ ರಾಜಕೀಯ ನಾಯಕರ ಪರ ‍ಪೋಸ್ಟರ್‌ಗಳು, ಹೇಳಿಕೆಗಳು, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಒಂದು ರಾಜಕೀಯ ಪಕ್ಷದ ಮುಖಂಡರನ್ನು ಮತ್ತೊಂದು ಪಕ್ಷದ ಅಭಿಮಾನಿ ಅಥವಾ ಕಾರ್ಯಕರ್ತ ಅವಹೇಳನಕಾರಿಯಾಗಿ ಟೀಕಿಸುವುದು, ನಿಂದಿಸುವುದು ನಡೆಯುತ್ತಿದೆ. ಇಂತಹ ಅಭಿಮಾನ ಅತಿರೇಕಕ್ಕೆ ಹೋದರೆ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ.

ಮಂಡ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಂಡು ಈವರೆಗೆ ಹತ್ತಾರು ರಾಜಕೀಯ ನಾಯಕರು ಬಂದು ಹೋಗಿದ್ದರೂ ಜಿಲ್ಲೆ ಅಭಿವೃದ್ಧಿಯಾಗಿರುವುದು ಅಷ್ಟರಲ್ಲೇ ಇದೆ. ಕೆಟ್ಟ ರಸ್ತೆಗಳಿವೆ, ಉತ್ತಮ ವೈದ್ಯಕೀಯ ಸೇವೆ ಇಲ್ಲ, ರೈತರಿಗೆ ಸೂಕ್ತ ಮಾರುಕಟ್ಟೆ ಇಲ್ಲ, ಇನ್ನೂ ವಿದ್ಯುತ್ ಕಾಣದ ಮನೆಗಳಿವೆ, ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲೇ ಇಲ್ಲ, ಎಲ್ಲರಿಗೂ ಉತ್ತಮವಾದ ಶಿಕ್ಷಣ ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಜಿಲ್ಲೆಯ ಜನ ಈಗಿನ ರಾಜಕೀಯ ಚಟುವಟಿಕೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಮಾಜದ ಶಾಂತಿ ಹಾಳು ಮಾಡದೆ, ಜನರು ವಿವೇಚನೆಯಿಂದ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !