ವಿಶ್ವವಿದ್ಯಾಲಯವೋ ವಸೂಲಿ ಕೇಂದ್ರವೋ?

7

ವಿಶ್ವವಿದ್ಯಾಲಯವೋ ವಸೂಲಿ ಕೇಂದ್ರವೋ?

Published:
Updated:

ಫಲಿತಾಂಶದಲ್ಲಿ ಏರುಪೇರು, ಬೇಜವಾಬ್ದಾರಿಯ ಕ್ರಮಗಳು ಮುಂತಾದ ಅವ್ಯವಸ್ಥೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ಮುನಿಸಿಗೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯವು ಈಗ ಮತ್ತೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಮುಗಿಸಿದ ವಿದ್ಯಾರ್ಥಿಗಳಿಗೆ ಕೊಡುವ ಪದವಿ ಪ್ರಮಾಣ ಪತ್ರಕ್ಕೆ ಶುಲ್ಕ ನಿಗದಿ ಮಾಡಲಾಗಿದ್ದು, ಪದವಿ ಮುಗಿಸಿದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ₹ 1,260; ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ₹ 915 ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ₹ 1,470; ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ₹ 1,020 ಶುಲ್ಕವನ್ನು ಡಿಸೆಂಬರ್ 15ರ ಒಳಗೆ ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ನೀಡಬೇಕು ಎಂದು ಸೂಚಿಸಲಾಗಿದೆ. ಇದರ ಅಗತ್ಯವಾದರೂ ಏನು?

ಮಂಗಳೂರು ವಿಶ್ವವಿದ್ಯಾಲಯದಡಿಯಲ್ಲೇ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುವುದಕ್ಕೆ ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿಯ ನಕಲು ಪ್ರತಿಗಳನ್ನು ಕೇಳುವುದೇಕೆ? ಅಷ್ಟೇ ಅಲ್ಲ ‘ಪದವೀಧರರು’ ಎಂದು ವಿದ್ಯಾರ್ಥಿಗಳ ಹೆಸರನ್ನು ಉಲ್ಲೇಖಿಸಿ ಕೊಡುವ ಸಾಮಾನ್ಯವಾದ ಒಂದು ಪ್ರಮಾಣ ಪತ್ರಕ್ಕೆ ಇಷ್ಟೊಂದು ಹಣ ವಸೂಲು ಮಾಡುವುದು ಸರಿಯೇ? ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಸಲು ವಿದ್ಯಾರ್ಥಿಗಳಿಂದ ಶುಲ್ಕ ಪಡೆಯಬೇಕೇ? ಇದು ವಿಶ್ವವಿದ್ಯಾಲಯವೋ, ವಸೂಲಿ ಕೇಂದ್ರವೋ? ಮಂಗಳೂರು ವಿಶ್ವವಿದ್ಯಾಲಯದ ಈ ಧೋರಣೆ ಖಂಡನೀಯ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !