ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪುರ– ಸಿಲ್ಕ್‌ಬೋರ್ಡ್‌ ಮೆಟ್ರೊ ಮಾರ್ಗಕ್ಕೆ ಟೆಂಡರ್‌

Last Updated 27 ಫೆಬ್ರುವರಿ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಕೆ.ಆರ್‌.ಪುರ– ಸಿಲ್ಕ್‌ಬೋರ್ಡ್‌ ಎತ್ತರಿಸಿದ ಮಾರ್ಗದ ಕಾಮಗಾರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಟೆಂಡರ್‌ ಆಹ್ವಾನಿಸಿದೆ.

ನವೀನ ಹೂಡಿಕೆ ವಿಧಾನದಲ್ಲಿ ಈ ಯೋಜನೆಗೆ ಹಣ ಸಂಗ್ರಹಿಸುವ ಪ್ರಸ್ತಾವವನ್ನು ನಿಗಮ ಹೊಂದಿದೆ. ಇತ್ತೀಚೆಗಷ್ಟೇ ಇದಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿತ್ತು.

ಸಿವಿಲ್‌ ಕಾಮಗಾರಿಯ ₹ 1,229 ಕೋಟಿ ಸೇರಿದಂತೆ ಈ ಯೋಜನೆಗೆ ಒಟ್ಟು ₹ 4,202 ಕೋಟಿ ವೆಚ್ಚವಾಗಲಿದೆ.  ₹1,100 ಕೋಟಿ ಮೊತ್ತವನ್ನು ನಿಗಮವು ಖಾಸಗಿ ಹೂಡಿಕೆದಾರರಿಂದ ಸಂಗ್ರಹಿಸಬೇಕಿದೆ. ಎರಡು ನಿಲ್ದಾಣಗಳ ನಿರ್ಮಾಣಕ್ಕೆ ಈಗಾಗಲೇ ಎರಡು ಕಂಪನಿಗಳು ಆಸಕ್ತಿ ತೋರಿಸಿದ್ದು, ತಲಾ ₹ 100 ಕೋಟಿ ಹೂಡಿಕೆ ಮಾಡಲು ಒಪ್ಪಿವೆ.

ಕಾಮಗಾರಿಯನ್ನು ನಿಗಮವು ಮೂರು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದೆ. ಈ ಪೈಕಿ ಸಿಲ್ಕ್‌ಬೋರ್ಡ್‌– ಬೆಳ್ಳಂದೂರು ಪ್ಯಾಕೇಜ್‌ನಲ್ಲಿ ನಾಲ್ಕು ನಿಲ್ದಾಣಗಳು, ಬೆಳ್ಳಂದೂರು– ದೊಡ್ಡನೆಕ್ಕುಂದಿ ನಡುವೆ ಐದು ನಿಲ್ದಾಣಗಳು ಹಾಗೂ ದೊಡ್ಡನೆಕ್ಕುಂದಿ– ಕೆ.ಆರ್‌.ಪುರ ನಡುವೆ ನಾಲ್ಕು ನಿಲ್ದಾಣ ನಿರ್ಮಾಣವಾಗಲಿವೆ.

ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ ನಡುವಿನ ರೀಚ್‌ 1 ವಿಸ್ತರಣೆಯಲ್ಲಿ ನಿರ್ಮಾಣಗೊಳ್ಳಲಿರುವ ಕೆ.ಆರ್‌.ಪುರ ನಿಲ್ದಾಣವು  ಹೊರ ವರ್ತುಲ ರಸ್ತೆಯ ಮೆಟ್ರೊ ಮಾರ್ಗ ಹಾಗೂ ಪೂರ್ವ–ಪಶ್ಚಿಮ ಕಾರಿಡಾರ್‌ ನಡುವಿನ ಇಂಟರ್‌ಚೇಂಜ್‌ ನಿಲ್ದಾಣವಾಗಲಿದೆ.

2ಎ ಹಂತ ಎಂದು ಗುರುತಿಸಲಾದ ಈ ಯೋಜನೆಯು ಹೊರವರ್ತುಲ ರಸ್ತೆಯಲ್ಲಿ ಹಾದುಹೋಗಲಿದೆ. ಇಲ್ಲಿನ ವಾಹನ ದಟ್ಟಣೆ ಸಮಸ್ಯೆಗೆ ಈ ಮೆಟ್ರೊ ಮಾರ್ಗವು ಪರಿಹಾರ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT