ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿನಿಗೆ ದೊರೆಯಲಿ ಯಶ

Last Updated 14 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬಡ ರೈತರು, ಮಧ್ಯಮ ವರ್ಗದ ಕುಟುಂಬಗಳಿಗೆ ಆಶಾಕಿರಣವಾಗಿದ್ದ ರಾಜ್ಯ ಸರ್ಕಾರದ ಯಶಸ್ವಿನಿ ಆರೋಗ್ಯ ಯೋಜನೆ ನಾಲ್ಕು ವರ್ಷಗಳ ಹಿಂದೆ ರದ್ದಾಗಿದ್ದು, ಅದನ್ನು ಇದೀಗ ಜನವರಿ 1ರಿಂದ ಪುನರಾರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಯೋಜನೆ ಕಳೆದ ಬಾರಿ ರಾಜ್ಯದ 43 ಲಕ್ಷ ಸದಸ್ಯರನ್ನು ಹೊಂದಿತ್ತಾದರೂ ಖಾಸಗಿ ಆಸ್ಪತ್ರೆ ಹಾಗೂ ಕೆಲ ಅಧಿಕಾರಿಗಳ ಹೊಂದಾಣಿಕೆಯ ಮೂಲಕ ಹಳ್ಳ ಹಿಡಿದಿತ್ತು. ಈಗಲೂ ಈ ಯೋಜನೆ ನಾಮಕಾವಸ್ತೆ ಆಗದೆ ಸರ್ಕಾರವು ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕಿ ಆಯಾ ಚಿಕಿತ್ಸೆಗೆ ನಿರ್ದಿಷ್ಟ ದರ ನಿಗದಿಗೊಳಿಸಬೇಕು.

ಗ್ರಾಮೀಣ ಭಾಗದ ಜನರಿಗೆ ಅವಶ್ಯವೆನಿಸುವ ಪ್ರಕರಣಗಳಿಗೆ ಎಲ್ಲೆಡೆ ಚಿಕಿತ್ಸೆ ದೊರೆಯುವಂತೆ ಆಗಬೇಕು. ಆ ಮೂಲಕ ಆ ವರ್ಗಕ್ಕೆ ಆತ್ಮಸ್ಥೈರ್ಯ ಒದಗಿಸಬೇಕು. ಮುಂದೆ ಸರ್ಕಾರದ ನೇತೃತ್ವ ವಹಿಸುವ ಪಕ್ಷ ಬದಲಾದರೂ ಯಾವುದೇ ಕಾರಣಕ್ಕೂ ಈ ಯೋಜನೆ ಸ್ಥಗಿತಗೊಳ್ಳಬಾರದು. ಯಶಸ್ವಿನಿಗೆ ಯಶ ದೊರೆಯುವಂತೆ ಆಗಬೇಕು.

ಕೆ.ಶ್ರೀನಿವಾಸ ರಾವ್,ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT