ಅರ್ಥರಹಿತ ಆಚರಣೆ ಬಿಡೋಣ

7

ಅರ್ಥರಹಿತ ಆಚರಣೆ ಬಿಡೋಣ

Published:
Updated:

ಕೆ.ಟಿ. ಗಟ್ಟಿ ಅವರ ಲೇಖನ, ‘ಆಚರಣೆ, ಅನುಕರಣೆ ಮತ್ತು ಸಂಸ್ಕೃತಿ’ (ಸಂಗತ, ಪ್ರ.ವಾ., ಜ. 3) ಮಾರ್ಮಿಕವಾಗಿತ್ತು. ಹೊಸ ವರ್ಷಾಚರಣೆ, ಹುಟ್ಟುಹಬ್ಬದಂಥ ಅರ್ಥಹೀನ ಆಚರಣೆಗಳು ಇಂದು ಸಾಂಕ್ರಾಮಿಕ ರೋಗದಂತೆ ವ್ಯಾಪಿಸುತ್ತಿವೆ.

ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿದ್ದ ಹೊಸ ವರ್ಷಾಚರಣೆಯು ಈಗೀಗ ಶಾಲಾ–ಕಾಲೇಜುಗಳಿಗೂ ವಿಸ್ತರಿಸಿ, ಸಮೂಹ ಸನ್ನಿ ರೂಪ ಪಡೆದಿದೆ. ಸರ್ಕಾರಿ ನೌಕರರು ಕಚೇರಿಯ ಅವಧಿಯಲ್ಲಿ ಹೊಸ ವರ್ಷ ಆಚರಿಸುತ್ತ ಸಮಯ ಹಾಳು ಮಾಡುವ ಬದಲು, ಗಿಡ ನೆಡುವುದು, ಸ್ವಚ್ಛತಾ ಆಂದೋಲನ, ಕಡತ ವಿಲೇವಾರಿ... ಇತ್ಯಾದಿ ಜನೋಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಬಹುದಲ್ಲವೇ?

ಜಿ.ಆರ್. ಹೆಗಡೆ, ಶಿರಸಿ

***

ಶ್ಲಾಘನೀಯ ಸಲಹೆ

‘ತಾಲ್ಲೂಕಿಗೊಂದು ಜಾತಿ ಹಂಗಿಲ್ಲದ ಹಾಸ್ಟೆಲ್’ ನಿರ್ಮಿಸುವಂಥ ಪರಿಕಲ್ಪನೆ ಇರುವ ವರದಿಯೊಂದನ್ನು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ನೀಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಜ. 4). ಇದು ಒಳ್ಳೆಯ ಬೆಳವಣಿಗೆ. ಮಕ್ಕಳಲ್ಲಿ ಸಾಮರಸ್ಯ ಭಾವನೆ ಬೆಳೆಸುವುದು ಸಮಾಜದ ಜವಾಬ್ದಾರಿ. ವಿದ್ಯಾರ್ಥಿ ದೆಸೆಯಲ್ಲಿಯೇ ಕೂಡಿ ಕಲಿತರೆ, ಭವಿಷ್ಯದಲ್ಲಿ ಮಕ್ಕಳು ಎಲ್ಲರೊಡನೆ ಪ್ರೀತಿ– ವಿಶ್ವಾಸದಿಂದ ಬೆರೆಯಲು ಸಾಧ್ಯವಾಗುತ್ತದೆ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬಲ್ಲ ಇಂಥ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಲಿ.

ವಸುಂಧರಾ ಕೆ.ಎಂ., ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !