ತಮಿಳುನಾಡಿಗೆ ಮನವರಿಕೆ ಮಾಡಿಕೊಡುತ್ತಿಲ್ಲ ಏಕೆ?

7

ತಮಿಳುನಾಡಿಗೆ ಮನವರಿಕೆ ಮಾಡಿಕೊಡುತ್ತಿಲ್ಲ ಏಕೆ?

Published:
Updated:

ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಅವರಿಂದ ಇಂತಹ ಪ್ರತಿಕ್ರಿಯೆ ಸಹಜ ಮತ್ತು ಸಾಮಾನ್ಯ. ಆದರೆ, ಹೊಗೇನಕಲ್‌ ಬಳಿ ಕುಡಿಯುವ ನೀರಿಗೆಂದು ತಮಿಳುನಾಡು ನಿರ್ಮಿಸಿಕೊಂಡ ಅಣೆಕಟ್ಟು ಈಗ ನೀರಾವರಿ ಉದ್ದೇಶಕ್ಕೂ ಬಳಕೆ ಆಗುತ್ತಿದೆ. ಅದಕ್ಕೆ ನಾವು ತಗಾದೆ ತೆಗೆದಿಲ್ಲ. ಈ ವಿಷಯವನ್ನು ನಮ್ಮ ನೀರಾವರಿ ತಜ್ಞರಾಗಲೀ ಕಾನೂನು ತಜ್ಞರಾಗಲೀ ತಮಿಳುನಾಡಿಗೆ ಏಕೆ ಮನವರಿಕೆ ಮಾಡಿಕೊಡುತ್ತಿಲ್ಲ?

ನಮ್ಮ ದೇಶಕ್ಕೆ ನೆರೆ ರಾಷ್ಟ್ರಗಳಿಂದ ಕಿರುಕುಳ ಆಗುತ್ತಿರುವಂತೆಯೇ ನಮ್ಮ ರಾಜ್ಯಕ್ಕೆ ನೆರೆ ರಾಜ್ಯಗಳಿಂದ ಯಾವುದಾದರೂ ಒಂದು ಕಿರಿಕಿರಿ ಇದ್ದೇ ಇರುತ್ತದೆ. ಇದಕ್ಕೆಲ್ಲ ಪ್ರಮುಖ ಕಾರಣ ನಮ್ಮ ರಾಜಕಾರಣಿಗಳು. ಅವರಿಗೆ ರಾಜ್ಯದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮತ್ತು ಸ್ವಂತ ಹಿತಾಸಕ್ತಿ ಮುಖ್ಯವಾಗಿದೆ. ಜತೆಗೆ, ಕರ್ನಾಟಕದ ಹಿತರಕ್ಷಣೆ ಬಗ್ಗೆ ಆಸ್ಥೆಯಿಲ್ಲದ ಐ.ಎ.ಎಸ್‌. ಅಧಿಕಾರಿಗಳ ದಂಡು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !