ಶುಕ್ರವಾರ, ಅಕ್ಟೋಬರ್ 18, 2019
20 °C

ಮಕ್ಕಳ ಊಟದಲ್ಲಿ ರಾಜಕೀಯ ಅನಗತ್ಯ

Published:
Updated:

ಬಿಸಿಯೂಟದ ಜೊತೆಗೆ ಮಕ್ಕಳಿಗೆ ಮೊಟ್ಟೆ ನೀಡಬೇಕೋ ಅಥವಾ ಮೊಳಕೆಕಾಳು ನೀಡಬೇಕೋ ಎಂಬ ವಿವಾದ ಸೃಷ್ಟಿಯಾಗಿರುವುದು ವಿಷಾದನೀಯ (ಪ್ರ.ವಾ., ಅ. 6). ಮಕ್ಕಳಿಗೆ ಪೌಷ್ಟಿಕ ಆಹಾರ ತುಂಬಾ ಅತ್ಯಗತ್ಯ. ಮೊಟ್ಟೆ ಮತ್ತು ಮೊಳಕೆಕಾಳುಗಳಲ್ಲಿ ಹೇರಳವಾಗಿ ಪೋಷಕಾಂಶಗಳಿರುವುದು ಸೂರ್ಯಸ್ಪಷ್ಟ.

ಲಕ್ಷಾಂತರ ಬಡ ಮಕ್ಕಳು ತಮ್ಮ ಕಲಿಕೆಗೆ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಅವರಿಗೆ ಪೌಷ್ಟಿಕಾಂಶಯುಕ್ತ ಬಿಸಿಯೂಟ ಪೂರೈಸುವುದು ಸರ್ಕಾರದ ಆದ್ಯ ಕರ್ತವ್ಯ.

ಸರ್ಕಾರ ಯಾವುದೇ ಒಂದು ವರ್ಗದ ಓಲೈಕೆಗೆ ಮಣಿಯದೆ, ಒಂದು ದಿನ ಮೊಟ್ಟೆ, ಮತ್ತೊಂದು ದಿನ ಮೊಳಕೆಕಾಳನ್ನು ಮಕ್ಕಳಿಗೆ ನೀಡಿದರೆ ಅನುಕೂಲವಾಗುತ್ತದೆ. ಇದರಲ್ಲಿ ಅನಗತ್ಯ ವಿವಾದ ಸಲ್ಲದು.

-ಗಣೇಶ ಆರ್., ಮಂಗಳೂರು

Post Comments (+)