ಶುಕ್ರವಾರ, ಡಿಸೆಂಬರ್ 13, 2019
26 °C

ಬಿಟ್ಟೆನೆಂದರೂ ಬಿಡದೀ ಮಾಯೆ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಮನುಷ್ಯನ ಬದುಕನ್ನು ಸ್ಮಾರ್ಟ್ ಆಗಿಸಲು ಬಳಕೆಗೆ ಬಂದ ಮೊಬೈಲ್ ಫೋನ್‌ಗಳು ಮನೋ
ವ್ಯಸನಕ್ಕೆ ದಾರಿ ಮಾಡಿಕೊಡುವ ಆಘಾತಕಾರಿ ಸಂಗತಿಯನ್ನು ‘ಒಳನೋಟ’ (ಪ್ರ.ವಾ., ನ. 17) ತೆರೆದಿಟ್ಟಿದೆ. ಇಂತಹ ಮನೋರೋಗಕ್ಕೆ ಚಿಕಿತ್ಸೆ ನೀಡಲು ಪ್ರತ್ಯೇಕ ಕ್ಲಿನಿಕ್ ಅನ್ನೇ ಆರಂಭಿಸಿರುವುದು ಮತ್ತೊಂದು ಅಚ್ಚರಿ. ಉತ್ತಮ ಆರೋಗ್ಯಕ್ಕೆ ಬೇಕಾದ ಆಹಾರ, ನಿದ್ರೆಯನ್ನು ತ್ಯಜಿಸಿದರೂ ಸರಿಯೇ ಸ್ಮಾರ್ಟ್ ಫೋನ್ ಬಿಡುವುದಿಲ್ಲ ಎಂಬಷ್ಟರ ಮಟ್ಟಿಗೆ ಮೊಬೈಲ್ ಮಾಯೆ ಜನರನ್ನು ಆವರಿಸಿದೆ.

ಕೇವಲ ಮಾತನಾಡಲು, ಸಂದೇಶ ರವಾನಿಸಲು ಇದ್ದ ಮೊಬೈಲ್ ಫೋನ್‌ ಈಗ ಮಾನವ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಕಲಿಯುವ, ನಲಿಯುವ, ಸಮಾಜದ ಮಹತ್ವವನ್ನು ತಿಳಿಯುವ ವಯಸ್ಸಿನಲ್ಲಿ ಮಕ್ಕಳು ಹಾಗೂ ಹದಿಹರೆಯದವರು ಸ್ಮಾರ್ಟ್‌ ಫೋನ್‌ಗಳಲ್ಲಿ ಮುಳುಗಿ ತಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೋಷಕರು ಸ್ವತಃ ಕೈಕಟ್ಟಿ ಕುಳಿತಿದ್ದಾರೆ, ಇಲ್ಲವೇ ತಾವೂ ಅಂತಹ ಗೀಳಿಗೆ ತುತ್ತಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕ್ಲಿನಿಕ್ ಆರಂಭಿಸುವುದು ನಿಷ್ಪ್ರಯೋಜಕ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಲು ಪೋಷಕರೇ ವೈದ್ಯರಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಆ ಕಾರ್ಯ ಆಗಬೇಕಾದರೆ, ಪೋಷಕರು ತಮಗಿರುವ ಮೊಬೈಲ್‌ ಗೀಳಿನಿಂದ ಮೊದಲು ಹೊರಬರಬೇಕು. ಆಗ, ಮಕ್ಕಳಿಗಿರುವ ಮೊಬೈಲ್‌ ಗೀಳನ್ನು ಹಂತಹಂತವಾಗಿ ಕಡಿಮೆ ಮಾಡಲು ಪ್ರಯತ್ನಿಸಬಹುದು

ಯೋಗೇಶ್ ವೈ.ಸಿ., ಮಂಡ್ಯ

 

ಒಳನೋಟ ಲೇಖನಗಳ ಲಿಂಕ್

ಮೊಬೈಲ್ ವ್ಯಸನ ಮುಕ್ತಿಗೆ ಕ್ಲಿನಿಕ್‌

ಸ್ಕ್ರೀನ್ ಟೈಮ್ ಆ್ಯಪ್ಸ್ ಮಾಹಿತಿ

ಮೊಬೈಲ್‌ ವ್ಯಸನದ ‘ಕಾಯಿಲೆ’ಗಳು

 

ಪ್ರತಿಕ್ರಿಯಿಸಿ (+)