ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಾವೇಷಪೂರಿತ ಮಾತು ಅಸಮಂಜಸ

Last Updated 23 ಸೆಪ್ಟೆಂಬರ್ 2019, 18:09 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಮುಂದಿನ ವರ್ಷ ಅಧ್ಯಕ್ಷ ಗಾದಿಗೆ ಚುನಾವಣೆ ನಡೆಯಲಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಬಹುಶಃ ಇದನ್ನು ಮನಸ್ಸಿನಲ್ಲಿಟ್ಟೇ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಡೊನಾಲ್ಡ್‌ ಟ್ರಂಪ್ ಅವರ ಪರವಾಗಿ ಹ್ಯೂಸ್ಟನ್‌ನಲ್ಲಿ ಸಾರ್ವಜನಿಕರ ಮುಂದೆ ಘೋಷಿಸಿದ್ದಾರೆ.

ಆ ಸಂದರ್ಭದಲ್ಲಿ ಅಮೆರಿಕದ ವಿರೋಧ ಪಕ್ಷದ ಮುಖಂಡರೂ ಇದ್ದರಷ್ಟೆ! ಭಾರತದ ಬಗ್ಗೆ ಟ್ರಂಪ್ ಅವರಿಗೆ ಅಭಿಮಾನ, ಮೆಚ್ಚುಗೆ ಇದೆ, ನಿಜ. ಆದರೂ ಅತಿ ಸಂಭ್ರಮದಿಂದ ಮೋದಿ ಅವರು ಹೀಗೆ ಹೇಳಿದ್ದು ಸಮಂಜಸವಲ್ಲ. ಏಕೆಂದರೆ, ಭಾರತದ ಪ್ರಧಾನಿಯಾಗಿ ಮೋದಿ ಅವರು ಅಲ್ಲಿಗೆ ಹೋಗಿದ್ದು. ಹೀಗಾಗಿ ಅವರ ಭಾವಾವೇಷಪೂರಿತ ಮಾತು ಅನುಚಿತ ಎನಿಸುತ್ತದೆ.

ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT