ಶುಕ್ರವಾರ, ಅಕ್ಟೋಬರ್ 18, 2019
20 °C

‘ಭಾರತ ಬಯಲುಶೌಚ ಮುಕ್ತ': ಪ್ರಧಾನಿಗೆ ಹಳ್ಳಿಗಳ ವಸ್ತುಸ್ಥಿತಿ ಅರಿವಾಗಲಿ

Published:
Updated:

ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯ ಪ್ರತಿಪಾದಕರಾದ ಗಾಂಧೀಜಿ ಜನ್ಮದಿನದಂದೇ ಸಾಬರಮತಿಯಲ್ಲಿ ‘ಭಾರತ ಬಯಲುಶೌಚ ಮುಕ್ತವಾಗಿದೆ’ ಎಂದು ಸುಳ್ಳು ನುಡಿದಿದ್ದಾರೆ! (ಪ್ರ.ವಾ., ಅ. 3) ಇದರಿಂದ, ನಮ್ಮ ಪ್ರಧಾನಿಗೆ ಭಾರತದ ಹಳ್ಳಿಗಳ ವಸ್ತುಸ್ಥಿತಿಯ ಅರಿವಿಲ್ಲ ಎಂಬುದು ತಿಳಿಯುತ್ತದೆ. ಅವರು ವಿದೇಶ ಪ್ರವಾಸಗಳಿಗೆ ತೋರುವ ಉತ್ಸಾಹವನ್ನು ಸ್ವದೇಶ ಪ್ರಯಾಣಕ್ಕೂ ತೋರಿ, ಹಳ್ಳಿಗಳಿಗೆ ಭೇಟಿ ನೀಡಲಿ. ಹಳ್ಳಿಗಳ ಬಯಲಲ್ಲಿ ಅವರಿಗೆ ‘ಡಿಜಿಟಲ್ ಇಂಡಿಯಾ’ದ ಇನ್ನೊಂದು ಮುಖದ ದರ್ಶನವಾಗುತ್ತದೆ.

–ಸೇವಂತಿ, ಮೈಸೂರು

Post Comments (+)