ಶನಿವಾರ, ಸೆಪ್ಟೆಂಬರ್ 25, 2021
22 °C

ಕಲಿಸಬೇಕಿದೆ ಒಪ್ಪ ಓರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಸ್ಕೃತಿ ಕಲಿಸದ ಶಿಕ್ಷಣ!’ದ ಕುರಿತು ಡಾ. ಚೆನ್ನು ಅ. ಹಿರೇಮಠ ಅವರು ಬರೆದಿರುವ ಲೇಖನ ಸಾಂದರ್ಭಿಕವಾಗಿದೆ (ಸಂಗತ, ಅ. 27). ಕೆಲವು ಶಾಲೆಗಳಲ್ಲಿ ‘ಮಾರಲ್ ಸೈನ್ಸ್’ ಎನ್ನುವ ಪಠ್ಯ ವಿಷಯವನ್ನು ಹೆಸರಿಗಷ್ಟೇ ಪರಿಚಯಿಸಿದ್ದಾರೆ. ಶಾಲೆಯ ಶೌಚಾಲಯದ ನಲ್ಲಿ ಕಿತ್ತು ಹಾಕುವುದು, ಶೌಚಾಲಯದ ಬಕೆಟ್ಟಿನಲ್ಲಿ ಮೂತ್ರ ಮಾಡುವುದು, ಕಿಟಕಿಯ ಗಾಜನ್ನು ಒಡೆದು ಹಾಕುವಂತಹ ಕೃತ್ಯಗಳನ್ನು ಮಾಡಿ ಆನಂದಿಸುವ ಮನಃಸ್ಥಿತಿಯ ಮಕ್ಕಳನ್ನು ಒಬ್ಬ ಶಿಕ್ಷಕಿಯಾಗಿ ಶಾಲೆಗಳಲ್ಲಿ ನಾನು ಕಂಡಿದ್ದೇನೆ. ಬಹುಶಃ ಇದಕ್ಕೆಲ್ಲ ಮನೆಯಲ್ಲಿನ ಪರಿಸರ ಕಾರಣವಾಗಬಹುದು. ಸ್ನಾನದ ನಂತರ ಟವೆಲ್‌ ಅನ್ನು ಒಣಗಲು ಹಾಕುವುದು, ಊಟದ ನಂತರ ತಟ್ಟೆಯನ್ನು ತೊಳೆಯಲು ಹಾಕುವಂತಹ ಸಣ್ಣಪುಟ್ಟ ಚಟುವಟಿಕೆಗಳಲ್ಲಿ ಒಪ್ಪ ಓರಣದ ಬಗ್ಗೆ ಮಕ್ಕಳಿಗೆ ಪೋಷಕರು ತಿಳಿಸಬೇಕು.

‘ಸ್ವಚ್ಛತೆಯೇ ದೇವರು’ ಎನ್ನುವ ಉಕ್ತಿಗೆ ಅನುಸಾರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯ ಇದೆ. ಜೊತೆಗೆ ಪ್ರವಾಸಿ ಸ್ಥಳಗಳನ್ನು ಅಪವಿತ್ರಗೊಳಿಸುವವರಿಗೆ ದಂಡ ವಿಧಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು