ಬುಧವಾರ, ಆಗಸ್ಟ್ 21, 2019
22 °C

ಹೊಸ ಸಂಚಾರ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿ

Published:
Updated:

ಹಲವಾರು ಉತ್ತಮ ಅಂಶಗಳನ್ನು ಒಳಗೊಂಡಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆಯು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವುದು ಸ್ವಾಗತಾರ್ಹ. ದೇಶದ ಸಂಚಾರ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಈ ಮಸೂದೆ ನೆರವಾಗಬಹುದು. ಆದರೆ, ಹೊಸ ನಿಯಮವು ಪೊಲೀಸರಿಗೆ ಚಾಲಕರನ್ನು ಶೋಷಿಸುವ ಅಸ್ತ್ರವಾಗಿ ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಅಪರಾಧವನ್ನು ದಾಖಲಿಸದೇ ದಂಡ ಹಾಕುವುದು, ರಸೀದಿ ನೀಡದೇ ಹಣ ವಸೂಲಿ ಮಾಡುವಂತಹ ದುರಭ್ಯಾಸಗಳಿಗೆ ಕಡಿವಾಣ ಅಗತ್ಯ. ಅಂತೆಯೇ ಹೊಸ ಸಂಚಾರ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು.

ರವಿಕುಮಾರ ಮಠಪತಿ, ಬೀದರ್

Post Comments (+)