ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಸೆ ಚಪ್ಪರಿಸುವ ಮೊದಲು...

Last Updated 12 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ದೋಸೆ ಚಪ್ಪರಿಸುವುದರಲ್ಲಿ ತಪ್ಪೇನಿದೆ?’ ಎಂದು ಬಿ.ಎಸ್‌.ಭಗವಾನ್‌ ಅವರು ಕೇಳಿರುವುದು (ವಾ.ವಾ.. ಸೆ. 12) ಹಾಸ್ಯಾಸ್ಪದವಷ್ಟೇ ಅಲ್ಲ ತೀರಾ ಬಾಲಿಶವಾಗಿಯೂ ಇದೆ. ತಪ್ಪಿರುವುದು ತಿಂಡಿ ಸವಿಯುವುದರಲ್ಲಿ ಅಲ್ಲ, ಬದಲಿಗೆ ಸಮಯ ಸಂದರ್ಭ ಎಂಥದ್ದು ಎಂಬುದರಲ್ಲಿ. ರಾಜ್ಯವು ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿರುವಾಗ, ಗಂಜಿ ಕೇಂದ್ರಗಳಲ್ಲಿ ಊಟಕ್ಕೂ ನೂಕುನುಗ್ಗಲಿರುವಾಗ ಒಬ್ಬ ಜನಪ್ರತಿನಿಧಿ ಬೆಣ್ಣೆ ಮಸಾಲೆದೋಸೆ ಚಪ್ಪರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸಂದರ್ಭವೇ ಇದನ್ನು ಅಮಾನವೀಯ ನಡೆ ಎಂದು ಹೇಳುತ್ತದೆ. ತೀರಾ ತಡೆಯಲಾಗದೆ ಬೇರೆಯವರ ಒತ್ತಾಯಕ್ಕೋ ಮತ್ತೊಂದಕ್ಕೋ ತಿಂದು ಚಪ್ಪರಿಸಲೇಬೇಕಾದ ಸಂದರ್ಭ ಬಂದರೆ ಕನಿಷ್ಠ ಆ ವಿಡಿಯೊವನ್ನು ಕಷ್ಟದಲ್ಲಿರುವವರಿಗೆ ತೋರಿಸದೆಯೂ ಇರಬಹುದಿತ್ತಲ್ಲವೇ?

- ರವಿಕಿರಣ್ ಶೇಖರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT