ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆ ಇಮ್ಮಡಿಯಾಯಿತು

Last Updated 25 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

2016ರ ಮಾರ್ಚ್‌ನಲ್ಲಿ ತುಮಕೂರಿನಲ್ಲಿ ನಡೆಯಬಾರದ ಒಂದು ಘಟನೆ ನಡೆದು ನಾಗರಿಕರನ್ನು ತಲ್ಲಣಗೊಳಿಸಿತ್ತು. ಮಗನೊಬ್ಬ ಸುಪಾರಿ ಕೊಟ್ಟು ಮಧ್ಯರಾತ್ರಿಯಲ್ಲಿ ತಂದೆತಾಯಿಯನ್ನೇ ಕೊಲೆ ಮಾಡಿಸಿಬಿಟ್ಟಿದ್ದ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಕೋರ್ಟ್‌ನಲ್ಲಿ ನಡೆದು ಇದೀಗ ಆದೇಶ ಹೊರಬಿದ್ದಿದೆ. ಸುಪಾರಿ ಕೊಟ್ಟ ಮಗ ಮತ್ತು ಎಲ್ಲ ಸುಪಾರಿ ಕೊಲೆಗಾರರಿಗೂ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ. ಈ ಆದೇಶ ನ್ಯಾಯಾಲಯದ ಮೇಲಿನ ಜನರ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

ಇಂತಹ ಆದೇಶಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದೇ ರೀತಿಯ ಇತರ ಬೇರೆಬೇರೆ ಕ್ರಿಮಿನಲ್‌ ಅಪರಾಧಗಳಿಗೂ ಶಿಕ್ಷೆ ತಪ್ಪಿದ್ದಲ್ಲ ಎಂಬ ಕಠಿಣ ಸಂದೇಶ ರವಾನೆ ಆಗುತ್ತದೆ. ಜೊತೆಗೆ ಈ ಪ್ರಕರಣದಲ್ಲಿ ಅಪರಾಧಿಗಳನ್ನು ಹಿಡಿಯುವಲ್ಲಿ ಪೊಲೀಸರ ಶ್ರಮ ಕೂಡ ಮೆಚ್ಚುವಂತಹದ್ದು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬ ಜನರ ನಿರೀಕ್ಷೆ ಹುಸಿಯಾಗಲಿಲ್ಲ.

ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT