ಬುಧವಾರ, ಸೆಪ್ಟೆಂಬರ್ 23, 2020
20 °C

ಮಕ್ಕಳಿಂದ ಪೋಷಕರ ಕೊಲೆ: ಗಂಭೀರವಾಗಿ ಚಿಂತಿಸಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣಪುಟ್ಟ ವಿಷಯಗಳಿಗಾಗಿ ಕೆಲವು ಮಕ್ಕಳು ಪೋಷಕರನ್ನೇ ಕೊಲ್ಲಲು ಮುಂದಾಗುತ್ತಿರುವುದು ತೀವ್ರ ಆತಂಕಕಾರಿ. ಬೆಂಗಳೂರಿನಲ್ಲಿ ಹುಡುಗಿಯೊಬ್ಬಳು ಇತ್ತೀಚೆಗೆ, ತನ್ನ ಗೆಳೆಯನ ಜೊತೆ ಒಡನಾಡಲು ಅಡ್ಡಗಾಲಾಗಿದ್ದ ತಂದೆಯನ್ನು ಗೆಳೆಯನ ಜೊತೆ ಸೇರಿ ಕೊಲೆ ಮಾಡಿದ್ದಳು ಎಂದು ವರದಿಯಾಗಿತ್ತು. ಇಂತಹುದೇ ಘಟನೆ ಬೆಳಗಾವಿಯಲ್ಲಿ ಮರುಕಳಿಸಿದೆ. ಗೇಮ್ ಆಡುತ್ತಿದ್ದುದನ್ನು ಪ್ರಶ್ನಿಸಿ ಮೊಬೈಲ್ ಫೋನ್‌ ಕಿತ್ತುಕೊಂಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನಂತೆ (ಪ್ರ.ವಾ., ಸೆ. 10). ಯಾವ ಪೋಷಕರೂ ತಮ್ಮ ಮಕ್ಕಳು ಹಾಳಾಗಲಿ ಎಂದು ಬಯಸುವುದಿಲ್ಲ. ಬುದ್ಧಿವಾದ ಹೇಳಿದ್ದಕ್ಕೇ ಮಕ್ಕಳು ಇಂತಹ ಅತಿರೇಕಕ್ಕೆ ಹೋಗುವುದು ಸಮಾಜ ಗಂಭೀರವಾಗಿ ಚಿಂತಿಸಬೇಕಾದ ವಿಚಾರ.

-ನರಸಿಂಹಮೂರ್ತಿ ಟಿ.ಆರ್‌., ತೊಂಡೋಟಿ, ಮಧುಗಿರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು