ಸೋಮವಾರ, ಏಪ್ರಿಲ್ 12, 2021
25 °C

ಸಂಗೀತ ಸುಧೆ: ನಟರಿಗಷ್ಟೇ ಪ್ರಾಶಸ್ತ್ಯ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ವಿವಿಧ ಟಿ.ವಿ ಚಾನೆಲ್‌ಗಳು ಸಂಗೀತ ಸ್ಪರ್ಧೆ ಏರ್ಪಡಿಸುವ ಮೂಲಕ ಸಂಗೀತ ಸುಧೆಯನ್ನು ಪಸರಿಸುತ್ತಿವೆ. ಇದರಿಂದ, ಎಲೆಮರೆ ಕಾಯಿಯಂತಿರುವ ಗಾಯಕರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ವೇದಿಕೆ ಕಲ್ಪಿಸಲು ಸಾಧ್ಯವಾಗಿದೆ.

ಇದರ ಅಂಗವಾಗಿ, ಕನ್ನಡದ ಜನಪ್ರಿಯ ನಟರ ಹುಟ್ಟುಹಬ್ಬದ ವಿಶೇಷವೆಂಬಂತೆ, ಸಂಗೀತ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. ಆ ನಾಯಕರು ಅಭಿನಯಿಸಿದ ಚಿತ್ರದ ಹಾಡುಗಳನ್ನು ಸ್ಪರ್ಧಾಳುಗಳಿಂದ ಹಾಡಿಸಲಾಗುತ್ತದೆ. ಆದರೆ, ಆ ಹಾಡುಗಳಿಗೆ ಸಾಹಿತ್ಯ ಬರೆದ, ಸಂಗೀತ ನೀಡಿದ, ಹಿನ್ನೆಲೆಯಲ್ಲಿ ಹಾಡಿದವರ ಹೆಸರುಗಳನ್ನೇ ಕಾರ್ಯಕ್ರಮ ನಿರ್ವಾಹಕರು ಪ್ರಸ್ತಾಪಿಸುವುದಿಲ್ಲ.

ಆಯಾ ಗೀತೆಗೆ ಆ ನಟರೇ ಎಲ್ಲವೂ ಎಂಬಂತೆ ಬಿಂಬಿಸಲಾಗುತ್ತದೆ. ಒಂದು ಹಾಡು ಸೊಗಸಾಗಿ ಮೂಡಿಬರುವುದಕ್ಕೆ ಕಾರಣರಾದವರನ್ನು ಬಿಟ್ಟು, ಅದರಲ್ಲಿ ನಟಿಸಿರುವ ನಾಯಕರನ್ನಷ್ಟೇ ವೈಭವೀಕರಿಸುವುದು ಎಷ್ಟು ಸರಿ?

–ಅಂಬಿ ಎಸ್. ಹೈಯ್ಯಾಳ್, ಮುದನೂರ ಕೆ., ಹುಣಸಗಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು