ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಸ್ಥಾನ ಆಲಂಕಾರಿಕವಾದುದಲ್ಲ

Last Updated 30 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಮೈಸೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದಾಗಿನಿಂದ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಹಲವಾರು ಮಹನೀಯರು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಮಹಾಪೌರರ ಹುದ್ದೆಯನ್ನು ಒಂದು ಪೂಜನೀಯ ಹುದ್ದೆ ಎಂದು ಪರಿಗಣಿಸಲಾಗಿದೆ. ಅವರು ಮಹಾನಗರದ ಪ್ರಥಮ ಪ್ರಜೆ ಕೂಡ ಆಗಿರುವುದರಿಂದ ಅವರ ಹುದ್ದೆಗೆ ಸಾಕಷ್ಟು ಮೆರುಗು ಇದೆ. ಮಹಾನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವ ಎಲ್ಲಾ ವಾರ್ಡುಗಳ ಉಸ್ತುವಾರಿ ಅವರಿಗೆ ಸೇರಿರುತ್ತದೆ. ಮೈಸೂರು ನಗರಕ್ಕೆ ಯಾರೇ ಗಣ್ಯ ವ್ಯಕ್ತಿಗಳು ಆಗಮಿಸಿದರೂ, ಅವರನ್ನು ಸ್ವಾಗತಿಸಿ ಬರಮಾಡಿಕೊಳ್ಳುವ ಕರ್ತವ್ಯವೂ ಮೇಯರ್ ಅವರದಾಗಿರುತ್ತದೆ. ಆದರೆ, ವಾಸ್ತವವಾಗಿ, ಮೇಯರ್ ಸ್ಥಾನವನ್ನು ಒಂದು ಆಲಂಕಾರಿಕ ಗೊಂಬೆಯ ಹಾಗೆ ಬೆಳೆಸುತ್ತಿರುವುದು ವಿಷಾದನೀಯ ಸಂಗತಿ.

ಈ ಬಗ್ಗೆ ಅನೇಕ ಮಾಜಿ ಮಹಾಪೌರರು ಬಹಿರಂಗವಾಗಿಯೇ ನೋವು ವ್ಯಕ್ತಪಡಿಸಿ, ತಾವು ನೆಪಮಾತ್ರಕ್ಕೆ ಮೇಯರ್, ಎಲ್ಲಾ ವಾಸ್ತವಾಧಿಕಾರಗಳು ಕಾರ್ಪೊರೇಷನ್ ಆಯುಕ್ತರ ಬಳಿಯೇ ಇವೆ ಎಂದು ಅಲವತ್ತುಕೊಂಡಿದ್ದಾರೆ. ದಸರಾ ಸೇರಿದಂತೆ ಹಲವಾರು ಮಹತ್ವದ ಕಾರ್ಯಕ್ರಮಗಳಲ್ಲಿ ಮೇಯರ್ ಅವರನ್ನು ಅಲಕ್ಷಿಸಿರುವ ಹತ್ತು ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅದೇನೇ ಇರಲಿ, ಮೇಯರ್ ಹುದ್ದೆಗೆ ಸಲ್ಲಬೇಕಾದ ಘನತೆ ಮತ್ತು ಗೌರವವನ್ನು ನೀಡಬೇಕಾದದ್ದು ಸಂಬಂಧಪಟ್ಟವರ ಕರ್ತವ್ಯ.

-ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT